ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ಯಲಬುರ್ಗಾ 01: ಪಟ್ಟಣದ ಒಂದನೇ ವಾರ್ಡಿನಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆಯನ್ನು ಒಂದನೇ ವಾರ್ಡಿನ ಪಪಂ ಸದಸ್ಯೆ ಕಲಾವತಿ ಮರದಡ್ಡಿ ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣ ಪಂಚಾಯತಿ ವ್ಯಾಪ್ತಿಯಾ 14ನೇ ಹಣಕಾಸು ಯೋಜನೆಯ ಉಳಿತಾಯ ಅನುದಾನದಲ್ಲಿ ನಮ್ಮ ವಾರ್ಡಿನ ಹರ್ತಿ ಅವರ ಓಣಿಯಲ್ಲಿ ಅಂದಾಜು ಎರಡು ಲಕ್ಷ ಐವತ್ತು ಸಾವಿರ ಮೊತ್ತದ “ಫೇವರ್ಸ್ ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ ಕುಡಿಯುವ ನೀರಿನ ಅನುದಾನದಡಿಯಲ್ಲಿ ಪೈಪ್ ಲೈನ್ ಕಾಮಗಾರಿಗೆ ಅಂದಾಜು ಒಂದು ಲಕ್ಷ ಇಪ್ಪತೈದು ಸಾವಿರ ಮೊತ್ತದ ಕಾಮಗಾರಿಯನ್ನು ಮಾಡುತ್ತಿದ್ದು ಇದ್ದನ್ನು ವಾರ್ಡಿನ ಸಾರ್ವಜನಿಕರು ಸದುಪಯೋಗವನ್ನು ಪಡಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪಪಂ ಸ್ಥಾಯಿ ಸಮೀತಿ ಅಧ್ಯಕ್ಷ ವಸಂತ ಭಾವಿಮನಿ, ಪಪಂ ಸದಸ್ಯ ಕಳಕಪ್ಪ ತಳವಾರ, ಮುಖ್ಯಾಧೀಕಾರಿ ಶಿವುಕುಮಾರ ಕಟ್ಟಿಮನಿ, ಗುತ್ತಿಗೆದಾರ ಶಂಕರ ಭಾವಿಮನಿ, ಮುಖಂಡ ಈರ್ಪ ಬಣಕಾರ, ದೊಡ್ಡಯ್ಯ ಗುರವಿನ್, ಸಂಗಪ್ಪ ಜಾಲಿಹಾಳ, ಬಸವಲಿಂಗಪ್ಪ ಹರ್ತಿ, ವಿರುಪಾಕ್ಷಯ್ಯ ಪರಯ್ಯನಮಠ, ಕಲ್ಲಪ್ಪ ಕರಮುಡಿ, ಗುರುಪಾದಪ್ಪ ಬನ್ನಿಕೊಪ್ಪ, ಸಂಗಪ್ಪ ಜಾಲಿಹಾಳ್, ಬಸಯ್ಯ ಮೈಸೂರುಮಠ, ವಿನೋದ್, ಚಂದ್ರು ಮರದಡ್ಡಿ ಸೇರಿದಂತೆ ಮತ್ತಿತರಿದ್ದರು.