ಮಹಲಿಂಗಪುರ

ಅಧ್ಯಕ್ಷ ಸಿದ್ದುಗೌಡ ಪಾಟೀಲರಿಂದ ಭೂಮಿ ಪೂಜೆ

ಅಧ್ಯಕ್ಷ ಸಿದ್ದುಗೌಡ ಪಾಟೀಲರಿಂದ ಭೂಮಿ ಪೂಜೆ

ಮಹಾಲಿಂಗಪುರ 14: ಸಮೀಪದ ರನ್ನ ಬೆಳಗಲಿ ಪಟ್ಟಣದ 09 ನೇ ವಾರ್ಡಿನಲ್ಲಿ 8.80.ಲಕ್ಷ ಅಂದಾಜು ವೆಚ್ಚದ ಮಹಿಳೆಯರ  ಶೌಚಾಲಯ  ಹಾಗೂ ಬ್ರಹ್ಮದೇವರ ದೇವಸ್ಥಾನದ ಓಣಿಯ ಚರಂಡಿ ನಿರ್ಮಾಣ ಕಾಮಗಾರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ಸಾಯ್ಥಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಲಾಗದವರ, ಮಹಾಲಿಂಗಪುರ ಎಪಿಎಮ್‍ಸಿ. ನಿರ್ದೇಶಕ ಈರಪ್ಪ ಕಿತ್ತೂರ, ಪಪಂ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಪಂಚಾಯಿತಿ ಸದಸ್ಯ ಕರಪ್ಪ ಭಾವಿಮನಿ, ಮಹಾಲಿಂಗಪ್ಪ ಪುರಾಣಿಕ, ಪಾಂಡಪ್ಪ ಸಿದ್ದಾಪೂರ, ಮಾದೇವ ಮುರನಾಳ ಮತ್ತು ಮುಖಂಡ ಸಿದ್ದು ಧಡೂತಿ, ಗಂಗಪ್ಪ ಗುಡ್ಲಾರ, ಬಸು ಪೂಜಾರಿ, ಮಂಜು ಮದರಖಂಡಿ, ಗುತ್ತಿಗೆದಾರರ ಸುರೇಶ ಮೇತ್ರಿ ಇತರರು ಇದ್ದರು.

ಸುದ್ದಿ ಓದಿ