ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ
ರಾಮದುರ್ಗ 31: ಮಲಪ್ರಭಾ ಪ್ರವಾಹ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದಾ ರಾಜ್ಯ ಸರಕಾರದ ಅಂದಾಜು 1030 ಕೋಟಿ ಹಣ ನಷ್ಟವಾಗಿ ಅಭಿವೃದ್ದಿ ಕಾಮಗಾರಿಗಳಿಗೆ ಕೊಂಚ ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಲೋಕೊಪಯೋಗಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಒಟ್ಟು ರೂ. 14.70 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮನೆ ಮನೆ ಗಂಗೆ ಎಂಬ ಮಹತ್ವದ ಯೋಜನೆಗೆ ಸುಮಾರು ರೂ. 2200 ಕೋಟಿ ಅನುದಾನ ನೀಡಿ ರಾಜ್ಯದ ಪ್ರತಿ ಹಳ್ಳಿಗೂ ಶುದ್ದ ಕುಡಿಯುವ ನೀರು ಪೊರೈಸಲು ಯೋಜನೆ ರೂಪಿಸಲಾಗಿದೆ, ನೀರು ಅತ್ಯಂತ್ಯ ಉಪಯುಕ್ತವಾದುದು, ಸದ್ಬಳಕೆ ಮಾಡಿವದರೊಂದಿಗೆ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಅನಾವಶ್ಯಕವಾಗಿ ಬಳಕೆ ಮಾಡಿದರೆ ಹೋಳಿ, ಕೊಳ್ಳ ಮತು ಸಮುದ್ರಗಳನ್ನು ಮುಂದಿನ ಪೀಳಿಗೆಗೆ ನಕ್ಷೆಯಲ್ಲಿ ತೊರಿಸುವ ದುಸ್ಥಿತಿ ಬರಬಹುದು ಎಂದು ಖೇದ ವ್ಯಕ್ತಪಡಿಸಿದರು.
30 ಸಾವಿರ ಕಿಮೀ ಹಳ್ಳಿ ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಪರಿವರ್ತಿಸಲು ಹಾಗೂ 50 ಸಾವಿರ ಜಿಲ್ಲಾ ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಪರಿವತರ್ಿಸಲು ರಾಜ್ಯ ಸರಕಾರ ಕ್ರಮಕೈಕೊಳ್ಳಲಾಗಿದೆ ಎಂದು ಹೇಳಿದರು. ಸಾಲಹಳ್ಳಿಯ ಸುಮಾರು 19 ಅಲೆಮಾರಿ ಕುಟುಂಬಗಳಿಗೆ ಮನೆ ಹಾಗೂ ಮೂಲಭೂಸೌಲಭ್ಯಗಳನ್ನು ನೀಡಿಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಅಲ್ಲದೆ ಜಾಗ ನೀಡಲು ಮುಂದೆ ಬಂದರೆ ಸರಕಾರದಿಂದ ಖರೀದಿ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ತಾಲೂಕಿನ ಹಲಗತ್ತಿಯಿಂದಾ ಲೋಕಾಪೂರ ರಸ್ತೆಯನ್ನು ರಾಜ್ಯ ಮುಖ್ಯ ಹೆದ್ದಾರಿಯನ್ನಾಗಿಸಲು ಆಧ್ಯತೆಯನ್ನು ನೀಡಬೇಕು, ವೀರಭದ್ರೇಶ್ವರ ಏತ ನೀರಾವರಿ ಮತ್ತು ಸಾಲಾಪೂರ ಏತ ನೀರಾವರಿ ಯೋಜೆನೆಗೆ ಹಣ ಬಡುಗಡೆ ಮಾಡ ಕಾಮಗಾರಿಯು ತ್ವರೀತವಾಗಿ ಮುಗಿಯುವಂತೆ ನೋಡಿಕೊಳ್ಳಬೇಕು, ತಾಲುಕಿನ ಬಹುತೇಕ ರಸ್ತೆಗಳು ಪಕ್ಕದ ತಾಲೂಕಿನ ಕಾರ್ಖಾನೆಯ ವಾಹನಗಳ ಸಂಚಾರದಿಂದಾ ಹಾಳಾಗಿದ್ದು ರಸ್ತೆ ಅಭಿವೃದ್ದಿ ಪಡಿಸಲು ಅನುದಾನ ಬಿಡುಗಡೆಗೊಳಬೇಕೆಂದು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲೇಶಿ ಯಾದವಾಡ, ಜಿಲ್ಲಾ ಪಂಚಾಯತ ಸದಸ್ಯರಾ ಶಿವಕ್ಕ ಬೆಳವಡಿ, ಮಾರುತಿ ತುಪ್ಪದ, ಮಾರುತಿ ಕೊಪ್ಪದ, ಹಾಗೂ ಲೊಕೊಪಯೋಗಿ ಇಲಾಖೆ ಅಧೀಕ್ಷ ಅಭಿಯಂತರ ಬಿ ವಾಯ್ ಪವಾರ, ಕಾರ್ಯನಿರ್ವಾಹಕ ಅಭಿಯಂತರ ಸಂಜೀವ ಕುಮಾರ ಹುಲಕಾಯಿು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸೊಲ್ಲಾಪೂರ ಸಹಾಯಕ ಅಭಿಯಂತರ ರವಿಕುಮಾರ, ಚೆನ್ನಪ್ಪ ಲಮಾಣಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.