1.57 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ
ರಾಮದುರ್ಗ 06: ರಸ್ತೆಗಳ ಮೇಲೆ ನೀರು ಹರಿಸುವುದರಿಂದ ರಸ್ತೆಯು ಕಿತ್ತು ಹೋಗುವುದಲ್ಲದೆ ಊರಲ್ಲಿ ಮಲೀನ ವಾತಾರವರಣ ಸೃಷ್ಟಿಮಾಡುತ್ತದೆ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ ಕಾರಣ ನೀರಿನ ಸದ್ಬಳಿಕೆ ಮಾಡಿಕೊಂಡು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಸಲಹೆ ನೀಡಿದರು.
ತಾಲೂಕಿನ ಕಲ್ಮಡ ಗ್ರಾಮದಲ್ಲಿ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಸಿ ಸಿ ರಸ್ತೆ, ಚರಂಡಿ ಮತ್ತು ಅಂನವಾಡಿಗಳ ನಿರ್ಮಾಣ ಕಾಮಗಾರಿಗೆ ರೂ. 40 ಲಕ್ಷ, ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆಅಡಿ ಕಡ್ಲಿಕೊಪ್ಪ ಗ್ರಾಮದಲ್ಲಿ ಸಿ ಸಿ ರಸ್ತೆ, ವ್ಯಾಯಾಮ ಶಾಲೆ, ಸಮುದಾಯ ಭವನಗಳ ಜೀರ್ಣೋದ್ದಾರಕ್ಕೆ ರೂ. 100 ಲಕ್ಷ. ಪ್ರವಾಹದಿಂದಾ ಶೀಥಲಗೊಂಡ ಕಡ್ಲಿಕೊಪ್ಪ ಗ್ರಾಮದಲ್ಲಿ ಅಂಗಣವಾಡಿ ಕೇಂದ್ರಗಳ ನಿರ್ಮಾಣಕ್ಕೆ ರೂ17 ಲಕ್ಷ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಯೋಜನೆಗಳ ಲಾಭವನ್ನು ಪಡೆಬೇಕೆಂದು ನುಡಿದರು.
ಅಧಿಕಾರಿಗಳು ಕಾಮಗಾರಿಗಳ ಮೇಲೆ ಖದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು ಇದರಿಂದಾ ಕಳಪೆ ಕಾಮಗಾರಿಯನ್ನು ತಡೆಯಲು ಸಾಧ್ಯ ಜೊತೆಗೆ ಗ್ರಾವiಸ್ಥರು ಗುತ್ತಿಗೆದಾರರು ಬಳಕೆ ಮಾಡುವ ಸಿಮೇಂಟ, ಉಸುಕು ಮತ್ತು ಇತರೆ ವಸ್ತುಗಳು ಗುಣಾತ್ಮಕವಾಗಿವೆಯೇ ಎಂಬುದನ್ನು ವಿಕ್ಷೀಸಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಪಂಚಾಯತ ಸದಸ್ಯ ರೇಣಪ್ಪ ಸೋಮಗೊಂಡ, ಗ್ರಾಮ ಪಂಚಾಯತ ಅಧ್ಯಕ್ಷ ವಿಠ್ಠಲ ಸೋಮಗೊಂಡ ಹಾಗೂ ಗ್ರಾ. ಪಂ ಸದಸ್ಯರು. ಲೊಕೊಪಯೋಗಿ ಇಲಾಖೆ ಸಹಾಯಕ ಅಭಿಯಂತರ ರಮೇಶ ಸೊಲ್ಲಾಪೂರ, ಜಿಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ ಐ ಕೊಳ್ಳಿ, ಕುಟುಂಬ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಂಗಾರೆವ್ವ ವಂಟಮೂರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.