ಕೃಷ್ಣಾ ಜಲ ವಿವಾದ; ಸುಪ್ರೀಂ ಕೋರ್ಟ್ ಸಿಜೆಐ ಮಹತ್ವದ ನಿರ್ಣಯ
ನವದೆಹಲಿ, ಆಗಸ್ಟ್ 4 ಕೃಷ್ಣಾ ನದಿ ಜಲ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ... ಬಿಕ್ಕಟ್ಟು ಪರಿಹರಿಸಲು ನ್ಯಾಯಯುತ ಪರಿಹಾರ ನೀಡಬೇಕೆಂದು ಆಂಧ್ರ ಪ್ರದೇಶ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲರು, ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಕ್ರಮವಾಗಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠವೇ ಈ ಆರ್ಜಿಯ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತು. ಆದರೆ ಈ ಮನವಿಯನ್ನು ನಿರಾಕರಿಸಿದ ಮುಖ್ಯನ್ಯಾಯಮೂರ್ತಿ ಎನ್ ವಿ. ರಮಣ, ಈ ಎರಡೂ ರಾಜ್ಯಗಳಿಗೆ ತಾವು ಸೇರಿರುವ ಕಾರಣ, ಆರ್ಜಿಯ ವಿಚಾರಣೆ ಮತ್ತೊಂದು ನ್ಯಾಯಪೀಠಕ್ಕೆ ವರ್ಗಾಯಿಸಿ ನಿರ್ಣಯ ಕೈಗೊಂಡರು.
ಕೃಷ್ಣಾ ಜಿಲ್ಲೆಗಳಲ್ಲಿ ತೆಲಂಗಾಣ ರಾಜ್ಯ ಸರ್ಕಾರ ಕೈಗೊಂಡಿರುವ ಜಲಾಶಯಗಳ ನಿರ್ಮಾಣ ವಿರುದ್ದ ಆಂಧ್ರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆಂಧ್ರ ಪ್ರದೇಶ ಕ್ಕೆ ಲಭಿಸಬೇಕಿರುವ ನ್ಯಾಯಯುತ ಕೃಷ್ಣಾ ನೀರಿನ ಪಾಲನ್ನು ತೆಲಂಗಾಣ ಕಬಳಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಆರ್ಜಿ ಸಲ್ಲಿಸಿದೆ.