ಕೊವಿಡ್-19 : 3 ಕೋಟಿ 20 ಲಕ್ಷ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
ನ್ಯೂಯಾರ್ಕ್, ಸೆ 25 :ಜಾಗತಿಕ ಕೊವಿಡ್-19 ಪ್ರಕರಣಗಳ ಸಂಖ್ಯೆ ಗುರುವಾರ 3 ಕೋಟಿ 20 ಲಕ್ಷ ದಾಟಿದ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸಿಸ್ಟಮ್ಸ್ ಸೈನ್ಸ್ ಅಂಡ್ ಎಂಜಿನಿಯರಿಂಗ್ (ಸಿಎಸ್‌ಎಸ್‌ಇ) ತಿಳಿಸಿದೆ. ಜಾಗತಿಕ ಪ್ರಕರಣಗಳ ಸಂಖ್ಯೆ ಸದ್ಯ 3,20,48,333 ಕ್ಕೆ ತಲುಪಿದ್ದು, ವಿಶ್ವದಾದ್ಯಂತ ಮಾರಕ ಸೋಂಕಿನಿಂದ ಸಾವಿನ ಸಂಖ್ಯೆ 9,79,454ಕ್ಕೆ ಮುಟ್ಟಿದೆ ಎಂದು ಸಿಎಸ್ಎಸ್ಇ ಮಾಹಿತಿ ತಿಳಿಸಿದೆ.
ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ವರದಿಯಾಗಿವೆ. ಈ ವರೆಗೆ ದೇಶದಲ್ಲಿ 69,62,333 ಪ್ರಕರಣಗಳು ಮತ್ತು 2,02,467 ಸಾವುಗಳು ವರದಿಯಾಗಿವೆ. ಭಾರತದಲ್ಲಿ 57,32,518 ಪ್ರಕರಣಗಳು ವರದಿಯಾಗುವುದರೊಂದಿಗೆ ಅಮೆರಿಕದ ಸಂಖ್ಯೆಯ ಸಮೀಪದಲ್ಲಿದೆ. ಭಾರತ ನಂತರ ಸ್ಥಾನದಲ್ಲಿರುವ ಬ್ರೆಜಿಲ್ ನಲ್ಲಿ 46,24,268 ಪ್ರಕರಣಗಳು ಮತ್ತು 1,38,974 ಸಾವುಗಳು ವರದಿಯಾಗಿವೆ. ಸಾವಿನ ಸಂಖ್ಯೆಯಲ್ಲಿ ಬ್ರೆಜಿಲ್ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.
7,00,000 ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಇತರ ದೇಶಗಳಲ್ಲಿ ರಷ್ಯಾ, ಕೊಲಂಬಿಯಾ, ಪೆರು, ಮೆಕ್ಸಿಕೊ ಮತ್ತು ಸ್ಪೇನ್ ಸೇರಿವೆ. 35,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ ದೇಶಗಳಲ್ಲಿ ಅಮೆರಿಕ, ಬ್ರೆಜಿಲ್ ಭಾರತ, ಮೆಕ್ಸಿಕೊ, ಬ್ರಿಟನ್ ಮತ್ತು ಇಟಲಿ ಸೇರಿವೆ ಎಂದು ಕೇಂದ್ರ ತಿಳಿಸಿದೆ. ಯುಎನ್‍ಐ ಎಸ್ಎಲ್ಎಸ್ 1030