ಬಚ್ವನಕೇರಿಯಲ್ಲಿ ಚನ್ನಮ್ಮನ ಕೋಟೆ ಮರುಸೃಷ್ಠಿ : ಜಿಲ್ಲಾಡಳಿತ ವಿರುದ್ದ ಬೀದಿಗಿಳಿದ ಕಿತ್ತೂರು ನಾಡಿನ ಜನ : ಪ್ರತಿಭಟನೆ ಪ್ರಾರಂಭ

ಬಚ್ವನಕೇರಿಯಲ್ಲಿ ಚನ್ನಮ್ಮನ ಕೋಟೆ ಮರುಸೃಷ್ಠಿ : ಜಿಲ್ಲಾಡಳಿತ ವಿರುದ್ದ ಬೀದಿಗಿಳಿದ ಕಿತ್ತೂರು ನಾಡಿನ ಜನ : ಪ್ರತಿಭಟನೆ ಪ್ರಾರಂಭ

ಬೆಳಗಾವಿ, ಆ, 2 : ಜಿಲ್ಲೆಯ ಕಿತ್ತೂರಿನಲ್ಲಿ ರಾಣಿ ಚನ್ನಮ್ಮನ ಕೋಟೆಗೆ ಮರಸೃಷ್ಠಿಗೆ ಸರ್ಕಾರ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಬಚ್ಚನಕೇರಿ ಬಳಿ 52 ಎಕರೆ ಜಾಗ ಗುರುತು ಮಾಡಿರುವ ಕ್ರಮ ವಿರುದ್ದ ಕಿತ್ತೂರು ನಾಡಿನ ಜನ ಸಮರ ಸಾರಿದ್ದಾರೆ. ಇಂದು ಕಿತ್ತೂರು ಬಂದಗೆ ಕರೆ ನೀಡಿ ಪ್ರತಿಭಟನೆ ಪ್ರಾರಂಭಗೊಂಡಿದೆ.


   ಜಿಲ್ಲಾಡಳಿತ ಬಚ್ವನಕೇರಿ ಗ್ರಾಮದಲ್ಲಿ ಚನ್ನಮ್ಮನ ಕೋಟೆಯ ಮರುಸೃಷ್ಠಿಗೆ ನಿರ್ಧಾರಕ್ಕೆ ಕಿತ್ತೂರು ಜನರಿಂದ ತೀವ್ರ ವಿರೋಧವಾಗಿದ್ದು, ಕಿತ್ತೂರುನಲ್ಲಿರುವ ಚನ್ನಮ್ಮನ ಕೋಟೆ ಸ್ಥಳದಲ್ಲಿಯೇ ಈ ಕೋಟೆಯ ಮರುಸೃಷ್ಢಿ ಮಾಡುವಂತೆ ಒತ್ತಾಯಿಸಿ ಇಂದು ಕಿತ್ತೂರು ಪಟ್ಟಣ ಬಂದ್ ಗೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಕಿತ್ತೂರು ಪಟ್ಟಣದಲ್ಲಿ ಅಂಗಡಿಗಳು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗೀತಗೊಂಡಿದೆ.


      ಕಲ್ಮಠದ ಮಡಿವಾಳ ರಾಜಯೋಗೇಂದ್ರ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಬಗೊಂಡಿದೆ. ನಿಚ್ಚಣಕಿ ಮಠದಿಂದ ಚನ್ನಮ್ಮ ವೃತ್ತದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಗುತ್ತಿದೆ. ಬಳಿಕ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಿದ್ದಾರೆ. ಸದ್ಯ ಬೆಳಗಾವಿಗೆ ಕಿತ್ತೂರು ನಾಡಿನ ಜನರು ಲಗ್ಗೆ ಇಡಲಿದ್ದಾರೆ.

ಸುದ್ದಿ ಓದಿ