ರಾಮದುರ್ಗ

ಎಸ್ ಸಿ ಎಸ್ ಟಿ ಕುಟುಂಬಗಳಿಗೆ ಕಿಟ್ ವಿತರಣೆ

ಎಸ್ ಸಿ ಎಸ್ ಟಿ ಕುಟುಂಬಗಳಿಗೆ ಕಿಟ್ ವಿತರಣೆ

ರಾಮದುರ್ಗ7 : ಕೊರೊನಾದಿಂದಾ ಲಾಕಡೌನ್ಯಾಗಿ ಸಂದಿಗ್ದ ಸ್ಥಿತಿಯಲಿರುವ ಕಡು ಬಡ 1000 ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದಾ ಕಿಟಗಳನ್ನು ನೀಡುತ್ತಿದೆ, ಅರ್ಹ ಫಲಾನುಭವಿಗಳಿಗೆ ಸೌಲಭ್ಯದೊರೆಯುವಂತೆ ಇಲಾಖೆ ಅಧಿಕಾರಿಗಳು ಪ್ರಾಮಾಣಿಕ ಪಯ್ರತ್ನ ಮಾಡಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಪಟ್ಟಣದ ಬಾಲಕಿಯವರ ವಸತಿ ನಿಲಯದ ಆವರಣದಲ್ಲಿ ಎಸ್ಸಿ ಎಸ್ಟಿ ಸಮುದಾಯದ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಿಂದಾ ಕಿಟಿಗಳನ್ನು ವಿತರಿಸಿ ಹಾಗೂ ವಿಶೇಷ ಚೇತನರಿಗೆ ಕೊವಿಡ್ ಲಸಿಕಾ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೊರೊನಾ ವೈರಸ್ ತಾಲೂಕಿನಲ್ಲಿ ಇಳಿಮುಖವಾಗಿದ್ದು ಸಂತೋಷದ ಸಂಗತಿ. ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿಮಯಗಳನ್ನು ಪಾಲಿಸಿ ಕೊರೊನ ತಡೆಗಟ್ಟಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. 

ತಹಶೀಲ್ದಾರ ಮಲ್ಲಿಕಾಜರ್ುನ ಹೆಗ್ಗನ್ನವರ ಮಾತನಾಡಿ ಪಟ್ಟಣದ ಎಲ್ಲ ವಾರ್ಡನಲ್ಲಿರುವ ಎಸ್ ಸಿ ಎಸ್ ಟಿ ಸಮುದಾಯದ ಸುಮಾರು 1000 ಬಡ ಕುಟುಂಬಗಳ ಮನೆಗೆ ಕಿಟಗಳನ್ನು ವಿತರಿಸಲಾಗುವುದು ಯಾರು ವಿನಾ ಕಾರಣ ಕಛೇರಿಗೆ ಬರುವ ಅಶ್ಯಕತೆ ಇಲ್ಲಾ ಎಂದು ನುಡಿದ ಅವರು ಕಡು ಬಡ ಮತ್ತು ಅಲೆಮಾರಿಸಿ ಎಸಸಿ ಮತ್ತು ಎಸ್ಟಿ ಸಮುದಾಯದ ಕುಟುಂಬಗಳಿಗೆ ವಿತರಿಸಿಲಾಗುವುದು ಅನಾವಶ್ಯಕ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನಂದಾ ವಾಲಿ ಹಾಗೂ ಇಓ ಮುರಳಿಧರ ದೇಶಪಾಂಡೆ, ಪುರಸಭೆ ಅಧ್ಯಕ್ಷ ಶಂಕರ ಬೀಳಗಿ, ಉಪಾಧ್ಯಕ್ಷ ರಾಘವೆಂದ್ರ ದೊಡಮನಿ, ಪುರಸಭೆ ಮುಖ್ಯಾಧಿಕಾರಿ ಎಸ್ ಎ ಅಂಬಿಗೇರ ಹಾಗೂ ಇತರರು ಹಾಜರಿದ್ದರು.ಪಟ್ಟಣದ ಬಾಲಕಿಯವರ ವಸತಿ ನಿಲಯದ ಆವರಣದಲ್ಲಿ ಎಸ್ಸಿ ಎಸ್ಟಿ ಸಮುದಾಯದ ಜನರಿಗೆ ಸಮಾಜ ಕಲ್ಯಾಣ ಇಲಾಖೆಯಿಂದಾ ಕಿಟಿಗಳನ್ನು ವಿತರಿಸಿ ಹಾಗೂ ವಿಶೇಷ ಚೇತನರಿಗೆ ಕೊವಿಡ್ ಲಸಿಕಾ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ

 

ಸುದ್ದಿ ಓದಿ