ಮಹಲಿಂಗಪುರ

ಕೇಸರಕೊಪ್ಪ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ!

ಕೇಸರಕೊಪ್ಪ ಪ್ರೌಢಶಾಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ!

ಲೋಕದರ್ಶನ ವರದಿ 

ಮಹಾಲಿಂಗಪುರ 21 :  ಸಮೀಪದ ಕೇಸರಕೊಪ್ಪ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರು ದಕ್ಷಿಣದ ಸಾರಕ್ಕಿಯ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಜಂಪ್ ರೋಪ್ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳಾಗಿ ಹೊರ ಹೊಮ್ಮಿದ್ದಾರೆ.  

ಪ್ರೌಢಶಾಲಾ ವಿಭಾಗದಲ್ಲಿ ಪ್ರೀ ಸ್ಟೈಲ್ ಜಂಪರೋಪ್ ದಲ್ಲಿ ಲಕ್ಕವ್ವ ಮಿರ್ಜಿ ಪ್ರಥಮ, ಸ್ಪೀಡ್ ಪ್ರಿಂಟ್ ಡಬಲ್ ಅಂಡರ ಜಂಪ್ ರೋಪ್ ದಲ್ಲಿ ಅರ​‍್ಿತಾ ಪರೀಟ್, ಶ್ರೇಯಾ ಕೊಣ್ಣೂರ, ಸಂಜನಾ ಎಳ್ಳಮಸಿ, ಲಕ್ಕವ್ವ ಮಿರ್ಜಿ ತೃತಿಯ ಸ್ಥಾನ, ಜೊತೆಗೆ ಸ್ಪೀಡ್ ಸ್ಪ್ರಿಂಟ್ ಡಬಲ್ ಅಂಡರ್ ಫ್ರಿ ಸ್ಟೈಲ್ ದಲ್ಲಿ ತಯ್ಯಬಾ ಗದ್ಯಾಳ, ಸೃಷ್ಠಿ ಕಾನಟ್ಟಿ,ಪ್ರೇಮಾ ಶೇಗುನಶಿ ತೃತೀಯ ಸ್ಥಾನ, ಸ್ಪೀಡ್ ಸ್ಪ್ರಿಂಟ್ ಡಬಲ್ ಅಂಡರ್ ದಲ್ಲಿ ಪ್ರಜ್ವಲ್ ಮಾದರ,ಪ್ರಜ್ವಲ್ ಹುದ್ದಾರ, ಕವಿರಾಜ್ ಬ್ಯಾಕೋಡ, ಸಮರ್ಥ ಪಾಟೀಲ್ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.  

ಈ ಎಲ್ಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕ ಸಂಗಮೇಶ ಮುಕಾರ್ತಿಹಾಳ ತರಬೇತಿ ನೀಡಿದ್ದು, ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದ್ಯಸರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗ ಸೇರಿದಂತೆ ಊರಿನ ಗುರು ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮುಖ್ಯೋಪಾದ್ಯಾಯ ಸಿವಿ ಚೌದರಿ ತಿಳಿಸಿದ್ದಾರೆ. 


ಸುದ್ದಿ ಓದಿ