ಮಹಲಿಂಗಪುರ

ನಾಳೆ ಕೆಂಗೇರಿಮಡ್ಡಿ ಬಡಾವಣೆ ಕೆರೆ ಶಾಸಕ ಸಿದ್ದು ಸವದಿ ಚಾಲನೆ

ನಾಳೆ ಕೆಂಗೇರಿಮಡ್ಡಿ ಬಡಾವಣೆ ಕೆರೆ ಶಾಸಕ ಸಿದ್ದು ಸವದಿ ಚಾಲನೆ

ಮಹಾಲಿಂಗಪುರ : " ಊರಿಗೊಂದು ಕೆರೆ ಬಡಾವಣೆಗೊಂದು ಉದ್ಯಾನವನ " ನಿರ್ಮಾಣವಾದಲ್ಲಿ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಿ ಎಲ್ಲ ಜನರಿಗೆ ಸದಾ ಕಾಲ ಜೀವ ಜಲದೊಂದಿಗೆ ಶುದ್ಧ ಆಮ್ಲಜನಕ ಹೊಂದಿರುವ ವಾತಾವರಣ ದೊರೆಯುತ್ತದೆ ಇದೊಂದು ವೈಜ್ಞಾನಿಕ ಸತ್ಯವೂ ಆಗಿದೆ. 

ಪಟ್ಟಣಕ್ಕೆ ಶಿಖರದಂತಿರುವ ಕೆಂಗೇರಿಮಡ್ಡಿ ಬಡಾವಣೆಯ ಕೆರೆ ತನ್ನ ಒಡಲಲ್ಲಿ ಬಹಳ ವರ್ಷಗಳಿಂದ ತ್ಯಾಜ್ಯ ಕೊಳಚೆ ನೀರನ್ನೇ ತುಂಬಿಕೊಂಡು ಮತ್ತು ಸುತ್ತಲಿನ ಸಾರ್ವಜನಿಕರಿಗೆ ಬಯಲು ಸೌಚಕ್ಕೆ ಮೀಸಲಾಗಿ ಪರಿಸರವೆಲ್ಲ ಗಬ್ಬೆದ್ದು ಹೋಗಿ ರೋಗ ರುಜಿನಗಳಿಗೆ ಕಾರಣವಾಗಿದೆ. ಆದಷ್ಟು ಬೇಗ ಈ ಪ್ರದೇಶ ಶುಚಿಗೊಳ್ಳಲಿ ಎಂದು ಸ್ಥಳೀಯರು ಹೇಳುತ್ತಾರೆ. 

ಒಂದು ಗಾದೆ ಮಾತಿನಂತೆ ಕಾಲಾಂತರದಲ್ಲಿ' ತಿಪ್ಪೆಯ ಸೌಭಾಗ್ಯ ತೆರೆಯಿತು' ಎಂಬಂತೆ ಕೆಂಗೇರಿಮಡ್ಡಿ ಸಾಯಿ ಮಂದಿರ ಹಿಂದಿರುವ 2 ಎಕ್ರೆ ಜಮೀನಿನಲ್ಲಿರುವ ಪಾಳು ಬಿದ್ದಿರುವ ಕೆರೆಯ ಜೀರ್ಣೋದ್ಧಾರಕ್ಕಾಗಿ ಶಾಸಕರ ನಿಧಿಯಲ್ಲಿಯ ವಿಶೇಷ ಅನುದಾನ ಅಡಿಯಲ್ಲಿ 15ಲಕ್ಷ, ನಗರೋತ್ಥಾನ ಅಡಿ 8ಲಕ್ಷ ಒಟ್ಟು 23ಲಕ್ಷಗಳ ಮೊತ್ತದಲ್ಲಿ ಹೂಳೆತ್ತುವುದು, ಸುತ್ತ ಬೇಲಿ ಅಳವಡಿಸಿ ಗಿಡಗಳನ್ನು ನೆಟ್ಟು ಹಸಿರಿನಿಂದ ಕಂಗೊಳಿಸುವಂತೆ ಮಾಡಿ, ವಿಹಾರಿಗಳಿಗೆ ವಿಹಾರಿ ಪಥ ನಿರ್ಮಿಸಲಾಗುತ್ತದೆ. ಈ ಕೆಲಸದಿಂದ ಸುತ್ತ 1/2 ಕಿಮಿ ವರೆಗೆ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ ಇದರ ಶಂಕುಸ್ಥಾಪನೆಗಾಗಿ ರವಿವಾರ ಮುಂಜಾನೆ ತೇರದಾಳ ಶಾಸಕ ಸಿದ್ದು ಸವದಿ ಅವರು ಆಗಮಿಸಲಿದ್ದಾರೆ.  

ಮುಂದಿನ ಅವಧಿಯಲ್ಲಿ ಕೆರೆ ಸುತ್ತ ಆಧುನಿಕ ಪರಿಕರಗಳ ಬೆಳಕಿನ ವ್ಯವಸ್ಥೆ, ಪಕ್ಕದಲ್ಲಿರುವ ಸೌಚಾಲಯದ ಆಧುನಿಕರಣ, ವಿಹಾರಿಗಳಿಗೆ ಕೂಡ್ರಲು ಆಸನದ ವ್ಯವಸ್ಥೆ, ಒಟ್ಟಾರೆಯಾಗಿ ಚಿಕ್ಕ, ಚೊಕ್ಕ ಮಾದರಿ ಕೆರೆಯನ್ನಾಗಿ ಮಾಡಲು ನಿರ್ಧರಿಸಲಾಗಿ, ಸ್ಥಳೀಯ ಜನತೆಯ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಈ ಕಾರ್ಯಕ್ಕೆ ಸಹಕರಿಸಿದ ಮಾನ್ಯ ಶಾಸಕರಿಗೆ ಧನ್ಯವಾದಗಳು ಎಂದು 13ನೇ ವಾರ್ಡ್‌ ಸದಸ್ಯ ಶೇಖರ ಅಂಗಡಿ ತಿಳಿಸುತ್ತಾರೆ.  



ಸುದ್ದಿ ಓದಿ