ಮುಂದಗೋಡ

ಮುಂದಿನ ದಿನಗಳಲ್ಲಿ ಕಾವ್ಯ ಕಮ್ಮಟ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು: ಕೊಣಸಾಲಿ

ಮುಂದಿನ ದಿನಗಳಲ್ಲಿ ಕಾವ್ಯ ಕಮ್ಮಟ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು: ಕೊಣಸಾಲಿ

ಮುಂಡಗೋಡ 18: ತಾಲೂಕಿನ ಹುನಗುಂದ ಸರ್ಕಾರಿ ಪ್ರೌಢಶಾಲೆ ಸುಂದರವಾದ ಪರಿಸರದಿಂದ ಕೂಡಿದ್ದು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವ ಉತ್ತಮ ವಾತಾವರಣ ಕಲ್ಪಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವಸಂತ ಕೊಣಸಾಲಿ ಹೇಳಿದರು.  

ಶಾಲೆಯತ್ತ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಹುನಗುಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನಮ್ಮ ಶಾಲೆ ನಮ್ಮ ಶಿಕ್ಷಕರು ವಿಷಯದ ಕುರಿತು ಏರಿ​‍್ಡಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಸಾಪ ವತಿಯಿಂದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಕಾವ್ಯ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗುವುದು. ಪರಿಷತ್ತಿಗೆ ಸಹಕಾರ ಎಂದಿಗೂ ಹೀಗೆಯೇ ಇರಲಿ ಎಂದರು. ಡಾ.ಪಿ.ಪಿ.ಛಬ್ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಶಿಕ್ಷಕಿ ಎ.ಆರ್‌.ಗಾಣಿಗೇರ ಮಾತನಾಡಿದರು.  

ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಅನ್ನಪೂರ್ಣೇಶ್ವರಿ ಗುಡ್ಡಾಪುರಮಠ, ದ್ವಿತೀಯ ಭಾಗ್ಯಲಕ್ಷ್ಮೀ ಬಿಸನಳ್ಳಿ ಹಾಗೂ ತೃತೀಯ ಸ್ಥಾನ ಪಡೆದ ಖಾದರ್‌ಬಿ ಜಿಗಳೂರ್ ಮತ್ತು ಪೂಜಾ ದೋಣಿ ಹಾಗೂ ನೀಲಮ್ಮ ತೀರ್ಥ್‌ ಇವರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ನೀಡಲಾಯಿತು.    

ನಿಕಟಪೂರ್ವ ಅಧ್ಯಕ್ಷ ಸಹದೇವಪ್ಪ ನಡಿಗೇರ ಜಾನಪದ ಗೀತೆಯನ್ನು ಹೇಳಿ ರಂಜಿಸಿದರು. ಆರ್‌.ಜೆ.ಬೆಳ್ಳೆನವರ, ಯುವರಾಜ ಲಕ್ಕಿಕೊಪ್ಪ, ಎಸ್‌.ಡಿ.ಮುಡೆಣ್ಣವರ, ನಾಗವೇಣಿ ಕೋಡಿಯಾ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ