ಕಸ್ತೂರಿ ಮಹಲ್ : ನಾಡಿದ್ದು ಟ್ರೈಲರ್ ರಿಲೀಸ್

ಕಸ್ತೂರಿ ಮಹಲ್ : ನಾಡಿದ್ದು ಟ್ರೈಲರ್ ರಿಲೀಸ್

 
ಬೆಂಗಳೂರು, ಆಗಸ್ಟ್ 11 ಖ್ಯಾತ ನಿರ್ದೇಶಕ ದಿನೇಶ್ ಬಾಬು 50 ನೇ ಸಿನಿಮಾ ಕಸ್ತೂರಿ ಮಹಲ್ ನ ಟ್ರೈಲರ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.
 
ಶಾನ್ವಿ ಶ್ರೀವಾಸ್ತವ್, ‘ರಾಧಾ ರಮಣ’ ಧಾರವಾಹಿ ಖ್ಯಾತಿಯ ಸ್ಕಂದ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದ ಟ್ರೈಲರ್ ಇದೇ 13 ರಂದು ಸಂಜೆ 6.03 ಕ್ಕೆ ಬಿಡುಗಡೆಯಾಗಲಿದೆ.
 
ಮೈಸೂರು ರವೀಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ ಎಂದು ಚಿತ್ರತಂಡ ಈಗಾಗಲೇ ತಿಳಿಸಿದೆ.
 
ಚಿತ್ರ ಸೆಟ್ಟೇರುವ ಮುನ್ನವೇ ‘ಕಸ್ತೂರಿ ನಿವಾಸ’ ಶೀರ್ಷಿಕೆ ಕಾರಣ ವಿವಾದಕ್ಕೆ ಕಾರಣವಾಗಿತ್ತು.  ಡಾ. ರಾಜ್ ಅಭಿಮಾನಿಗಳು ಶೀರ್ಷಿಕೆ ಬದಲಿಸುವಂತೆ ಎಚ್ಚರಿಸಿದ್ದರು.  ಬಳಿಕ ಹಿರಿಯ ನಿರ್ದೇಶಕ ಭಗವಾನ್ ಅವರ ಜತೆ ಚರ್ಚಿಸಿ ‘ಕಸ್ತೂರಿ ಮಹಲ್’ ಎಂದು ಹೆಸರಿಡಲಾಗಿತ್ತು.  
 
ಅಲ್ಲದೆ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದ ರಚಿತಾ ರಾಮ್‍ ಹಲವು ಕಾರಣಗಳಿಗಾಗಿ ಚಿತ್ರತಂಡದಿಂದ ಹೊರನಡೆದು, ಆಕೆಯ ಜಾಗಕ್ಕೆ ಶಾನ್ವಿ ಶ್ರೀ ವಾಸ್ತವ್ ಆಯ್ಕೆಯಾಗಿದ್ದರು.

ಸುದ್ದಿ ಓದಿ