ಮಹಲಿಂಗಪುರ

ಕಾಶಿ ಪೀಠ ಯುಗ ಯುಗಗಳಿಂದ ಭಕ್ತರಿಗೆ ಅಧ್ಯಾತ್ಮ ಕೇಂದ್ರ: ಚಂದ್ರಶೇಖರ ಶಿವಾಚಾರ್ಯ

ಕಾಶಿ ಪೀಠ ಯುಗ ಯುಗಗಳಿಂದ ಭಕ್ತರಿಗೆ ಅಧ್ಯಾತ್ಮ ಕೇಂದ್ರ: ಚಂದ್ರಶೇಖರ ಶಿವಾಚಾರ್ಯ

ಮಹಾಲಿಂಗಪುರ13:  ಕಾಶಿ ಪೀಠ ಯುಗ ಯುಗಗಳಿಂದ ಭಕ್ತರಿಗೆ ಅಧ್ಯಾತ್ಮ ಕೇಂದ್ರವಾಗಿದೆ. ಸನಾತನ ಗುರು ಪರಂಪರೆಗೆ ಕಾಶಿಗೆ ಅಗ್ರ ಸ್ಥಾನ ಮತ್ತು ಕಾಶಿ ವಿಶ್ವನಾಥ ನೆಲೆಸಿರುವ ಭೂಮಿಯ ಮೇಲಿನ ಕೈಲಾಸವಾಗಿದೆ ಕಾಶಿ ಪೀಠದ 86 ಅಧಿಪತಿಗಳಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.  

ಸ್ಥಳೀಯ ಬನಶಂಕರಿ ದೇವಿ ದೇವಸ್ಥಾನದ ಆವರಣದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಅಂದಿನ 03 ಸಾವಿರ ಚದರ ಅಡಿಯ ಶ್ರೀ ಕಾಶಿನಾಥ ದೇವಸ್ಥಾನದ ಆವರಣ ಇಂದು 5ಲಕ್ಷ ಚದರ ಅಡಿಗಳಿಗೇರಿ ಆಧುನಿಕ ಸ್ಪರ್ಶ ಪಡೆದು ಭವ್ಯ ಕಾಶಿ ದಿವ್ಯ ಕಾಶಿಯಾಗಿ ಪರಿವರ್ತನೆಗೊಂಡಿದೆ ಎಂದು ಅಲ್ಲಿನ ಸುವ್ಯವಸ್ಥೆಗಳ ಬಗ್ಗೆ ವಿವರಣೆ ನೀಡಿದರು.ಸಿದ್ಧಾಂತ ಶಿಖಾಮಣಿ ಗ್ರಂಥ ಅಧ್ಯಾತ್ಮದ ಸಂವಿಧಾನವಿದ್ದಂತೆ, ಅದರಲ್ಲಿ 28 ಅಧ್ಯಾಯಗಳಿದ್ದು ಜಗತ್ತಿನ 19 ಭಾಷೆಗಳಿಗೆ ಅನುವಾದಗೊಂಡಿದೆ ಎಂದು ಹೇಳಿ ಅದರಲ್ಲಿಯ ಶ್ರೇಷ್ಠತೆಯನ್ನು ಒತ್ತಿ ಹೇಳಿದರು.  

ನೂತನ ಪೀಠಾಧಿಪತಿ ನೇಮಕ : ಸೊಲ್ಲಾಪುರದ ಹೋಡಗಿಮಠದ ಮಲ್ಲಿಕಾರ್ಜುನ ಸ್ವಾಮಿಗಳನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದು ಅವರ ಪಟ್ಟಾಭಿಷೇಕ ಕಾರ್ಯಕ್ರಮ ಮೇ 11,12, ಮತ್ತು 13 ರಂದು ನಡೆಯಲಿದೆ, ಕರ್ನಾಟಕ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ಸಾಧು ಸಂತರು ಭಾಗವಹಿಸಲಿದ್ದಾರೆ ಆದ್ದರಿಂದ ಈ ಕಾರ್ಯಕ್ರಮಕ್ಕೆ ಮಹಾಲಿಂಗಾಪುರದ ಹಾಗೂ ಹೋಬಳಿಯ ಸರ್ವ ಸಮಾಜದ ಭಕ್ತರಿಗೂ ಆಮಂತ್ರಣ ಕೊಡಲು ಬಂದಿದ್ದೇನೆ ಎಂದರು.  

ಈ ಸಂಧರ್ಭದಲ್ಲಿ ಪಟ್ಟಣದ ಎಲ್ಲ ಸಮುದಾಯಗಳ ಹಿರಿಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀಶೈಲಪ್ಪ ಉಳ್ಳೇಗಡ್ಡಿ, ಮಲ್ಲಪ್ಪ ಭಾವಿಕಟ್ಟಿ, ಮಾಹಾಂತೇಶ ಹಿಟ್ಟಿನಮಠ, ಯಲ್ಲನಗೌಡ ಪಾಟೀಲ, ಮಹಾಲಿಂಗಪ್ಪ ಕೋಳಿಗುಡ್ಡ, ಸಜನಸಾಬ ಪೆಂಡಾರಿ , ಅಶೋಕ ಅಂಗಡಿ,ಜಿ ಎಸ್ ಗೊಂಬಿ, ಮಲ್ಲನಗೌಡ ಪಾಟೀಲ್, ಮಹಲಿಂಗಪ್ಪ ಜಕ್ಕಣ್ಣವರ, ಹೊಳೆಪ್ಪ ಬಾಡಗಿ,ಶ್ರೀಶೈಲ ನುಚ್ಚಿ, ನಾರಾಯಣ ಕಿರಗಿ, ಶ್ರೀಶೈಲ ಕಿರಗಟಗಿ, ಶಂಕ್ರ​‍್ಪ ಹಣಗಂಡಿ, ಮಹಲಿಂಗಪ್ಪ ಲಾತೂರ, ಭೀಮಪ್ಪ ಪೂಜೇರಿ, ಹಣಮಂತ ಬುರುಡು, ಬಸವರಾಜ ಹಿಟ್ಟಿನಮಠ, ಈಶ್ವರ ಚಮಕೇರಿ, ಜಯವಂತ ಕಾಗಿ, ಸಿದಗಿರೆಪ್ಪ ಕಾಗಿ, ಬಿ. ಸಿ ಪೂಜಾರಿ, ಬಸಪ್ಪ ಪರೀಟ, ಅರ್ಜುನ ಮಡಿವಾಳ ಸೇರಿದಂತೆ ಹಲವರು ಇದ್ದರು 


ಸುದ್ದಿ ಓದಿ