ಸಿಟಿಎಸ್ ನಂ.312 ಸ್ವತ್ತು ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯ
ರಾಣೆಬೆನ್ನೂರು 25: ನಗರದ ಸಿಟಿಎಸ್ ನಂ:312, ಈ ಸ್ವತ್ತು: ಮಾದರ ಹೊಂಡ ಅಭಿವೃದ್ಧಿ , ಮೂಲ ಸೌಕರ್ಯಕ್ಜೆ ಮನವಿ ರಾಣೆಬೆನ್ನೂರು:25 ಸಿಟಿಎಸ್ ನಂಬರ್ 312ರ ಈ ಸ್ವತ್ತು ಕೊಡಬೇಕು, ಮಾದರ ಹೋಂಡಾ ಅಭಿವೃದ್ಧಿಪಡಿಸಬೇಕು, ಮತ್ತು ಕೆ. ಹೆಚ್. ಬಿ. ಕಾಲೋನಿಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ನೇತ್ರತ್ವದಲ್ಲಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬಾರವರು, ಈ ಸ್ವತ್ತು ಕೊಡುವ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದ್ದರು ಇದುವರೆಗೂ ಪರಿಹಾರ ಕಂಡಿಲ್ಲ. ನಗರದ ಕೆ. ಹೆಚ್. ಬಿ ಕಾಲೋನಿ ಹಿರಿಯರು ಮೂಲಭೂತ ಸೌಲಭ್ಯ ಕಲ್ಪಿಸಲು ಅನೇಕ ಬಾರಿ ನಗರಸಭೆಗೆ ಧಾವಿಸಿ ಮನವಿ ಸಲ್ಲಿಸಿದರು ಪ್ರಯೋಜನ ಕಂಡಿಲ್ಲ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಿಸಿದರು. ಅದೇ ರೀತಿ ನಗರದ ಹಳೆಯ ಇತಿಹಾಸದ ಮಾದರ ಹೊಂಡವೆಂದು ಪ್ರತೀತಿ ಹೊಂದಿರುವ ಹೊಂಡದ ಅಭಿವೃದ್ಧಿಗೆ ಮನವಿ ಮಾಡಲಾಗಿದ್ದರು, ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿಗೆ ಕ್ರಮ ಕೈಗೊಳ್ಳದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಖಂಡಿಸಿದರು.
ನಗರದ ವಾಣಿಜ್ಯ ಮಳಿಗೆಗಳು ಮಾರ್ಚ್ 2026ಕ್ಕೆ ಅವಧಿ ಮುಕ್ತಾಯ ಕಂಡಿದ್ದರು ಸಂಬಂಧಿಸಿದಂತೆ ಯಾವುದೇ ಹರಾಜು ಪ್ರಕ್ರಿಯೆ ನಡೆಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಕಾನೂನು ರೀತಿಯಲ್ಲಿ, ಸಂವಿಧಾನಬದ್ಧವಾಗಿ, ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಬೇಕು ಎಂದು ಕಬ್ಬಾರ್ ಆಗ್ರಹಿಸಿದರು. ಕೂಡಲೆ ಕ್ರಮ ಕೈಗೊಳ್ಳಬೇಕು, ಇಲ್ಲದೆ ಹೋದರೆ ಬರುವ ಜೂನ್ ತಿಂಗಳು 1,2026 ರಂದು ಕಚೇರಿ ಎದುರುಗಡೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಅನಿರ್ದಿಷ್ಟ ಹೋರಾಟ ಮತ್ತು ಧರಣಿ ಹಮ್ಮಿ ಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಕಿರಣ ಗುಳೇದ ಮಂಜುನಾಥ್ ಗುಡ್ಡಣ್ಣನವರ, ಅಮೀದಾ ಬಾನು ಶಿಡೇನೂರ, ಶೈಲಮ್ಮ ಹರನಗಿರಿ, ಕೊಟ್ರಮ್ಮ ಕಾಯಕದ, ನಾಗಮ್ಮ ತಳವಾರ ಸೇರಿದಂತೆ ಸಂಘಟನೆಯ ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.