ಕರ್ನಾಟಕದ ಯಕ್ಷಗಾನ ಕಲೆ ಸನಾತನ ಸಂಸ್ಕೃತಿಯ ಪ್ರತೀಕ: ಶಾಸಕ ಸಿದ್ದು ಸವದಿ
ಮಹಾಲಿಂಗಪುರ 11: ಯಕ್ಷಗಾನ ಕಲೆ ಸಾಂಪ್ರದಾಯಿಕವಾಗಿ ಬಂದಂತಹದು.ಕರ್ನಾಟಕದ ಯಕ್ಷಗಾನ ಕಲೆ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿದೆ.ಅದರದೇ ಆದ ವೈಶಿಷ್ಟತೆ ಹೊಂದಿದ್ದು ದೇಶಾದ್ಯಂತ,ರಾಜ್ಯದ್ಯಂತ ಪ್ರದರ್ಶಿಸುತ್ತಿರುವ ಕಲಾವಿದರು ಪುಣ್ಯವಂತರು.ಅವರನ್ನು ಗೌರವಿಸುವುದರ ಜೊತೆಗೆ ಕಲೆಯನ್ನು ಉಳಿಸುವಂತಹ ಕಾರ್ಯ ನಮ್ಮಿಂದಾಗಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀಕ್ಷೇತ್ರ ಹಟ್ಟಿಯಂಗಡಿ ಮೇಳದಿಂದ ನಡೆದ 'ಸಿರಿ ಸಿಂಗಾರಿ ಪ್ರಸಂಗ' ಸನ್ನಿವೇಶದ ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಂತರ ಯಕ್ಷಗಾನ ಮಂಡಳಿ ನಿರ್ದೇಶಕ ರವಿರಾಜ ಶೆಟ್ಟಿ ಮತ್ತು ವ್ಯವಸ್ಥಾಪಕ ರಂಜಿತ್ ಶೆಟ್ಟಿ ಮಾತನಾಡಿ ಈ ಯಕ್ಷಗಾನ ಮಂಡಳಿ ಹತ್ತು ವರ್ಷ ಪೂರೈಸಿ ಹನ್ನೊಂದನೇ ವರ್ಷಕ್ಕೆ ಪಾದಾರೆ್ಣ ಮಾಡಿದೆ.ನಿಮ್ಮೆಲ್ಲರ ಸಹಕಾರ,ಅಭಿಮಾನ ಹೀಗೆ ಇರಲಿ ಎಂದರು.
ಕಲಾವಿದರಾದ ವಿನಯ ಶೆಟ್ಟಿ, ರಾಕೇಶ್ ಮಲ್ಯಾ, ಸುಬ್ರಹ್ಮಣ್ಯ ಹೆಗಡೆ, ನರಸಿಂಹ ಗಾವಕರ, ಸಿತಿಲ್ ಶೆಟ್ಟಿ ರಮೇಶ ಭಂಡಾರಿ, ತಿಲಕರಾಜ, ನವೀನ್, ಸುರಾಜ, ನಾಗಶ್ರೀ ಜಿ ಎಸ್, ಗೌತಮ, ರಾಘು ಇವರೆಲ್ಲರ ನಟನೆ ಯಕ್ಷಗಾನ ಪ್ರಿಯರನ್ನು ರಂಜಿಸಿತು. ಸಹಕಾರ ನೀಡಿದ ಜಯರಾಮ ಶೆಟ್ಟಿ ಮತ್ತು ಸುರೇಶ ಶೆಟ್ಟಿಯವರಿಗೆ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯ ಶೇಖರ ಅಂಗಡಿ, ಶಂಕರಗೌಡ ಪಾಟೀಲ, ಸಂಗಪ್ಪ ಹಲ್ಲಿ, ಮಹಾದೇವ ಮಾರಾಪುರ, ಮಲ್ಲಪ್ಪ ಬಾವಿಕಟ್ಟಿ, ಪ್ರಕಾಶ ಮಮದಾಪುರ, ಮಹಾದೇವ ಬರಗಿ, ರವಿ ಮುಂಡಗನೂರ, ಮಹೇಶ ಮನ್ನಯ್ಯನವರಮಠ, ಶಿವಲಿಂಗ ಟಿರ್ಕಿ, ರವಿ ಜವಳಗಿ, ರಾಜೇಂದ್ರ ಮಿರ್ಜಿ, ಬಸವರಾಜ ಮೇಟಿ, ಜಿಎಸ್ ಬರಗಿ, ನಿಂಗಪ್ಪ ಬಾಳಿಕಾಯಿ, ಈರಣ್ಣ ಹಲಗತ್ತಿ, ವೀರೇಶ್ ಆಸಂಗಿ, ಮಹೇಶ ಜಿಡ್ಡಿಮನಿ, ಶಿವಾನಂದ ನುಚ್ಚಿ, ವಿವೇಕ ಢಫಳಾಪುರ, ವೈನ್ ಮಚೆಂರ್ಟ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಯಾದವಾಡ, ಕಾರ್ಯದರ್ಶಿ ರಾಜು ಜಂಬಗಿ, ಸಂತೋಷ್ ದೇವಾಡಿಗ, ಸುರೇಶ್ ದೇವಾಡಿಗ, ಹರೀಶ್ ದೇವಾಡಿಗ, ರಾಜೇಶ್ ಶೆಟ್ಟಿ, ಶಶಾಂಕ್ ಶೆಟ್ಟಿ, ಅರವಿಂದ ಶೆಟ್ಟಿ ಸೇರಿದಂತೆ ಇತರರಿದ್ದರು. ಪತ್ರಕರ್ತ ಜಯರಾಮ ಶೆಟ್ಟಿ ನಿರೂಪಿಸಿ, ವಂದಿಸಿದರು.