ಕರಡಿಗುದ್ದಿ ಕೊಲೆ ಪ್ರಕರಣ : ನಾಲ್ವರು ಆರೋಪಿಗಳನ್ನು ಬಂಧಿಸಿದ ಮಾರಿಹಾಳ ಪೊಲೀಸರು
ಬೆಳಗಾವಿ, ಏ. 1 : ತಾಲೂಕಿನ ಕರಡಿಗುದ್ದಿ ಗ್ರಾಮದ ಬಳಿ ಗುರುವಾರ ಸಂಜೆ ಎರಡು ಗುಂಪುಗಳಲ್ಲಿ ನಡೆದ ಹೊಡೆದಾಟದಲ್ಲಿ ಓರ್ವನನ್ನು ಕೊಲೆ ಮಾಡಿರುವ ನಾಲ್ವರು ಆರೋಪಿತರನ್ನು ಮಾರಿಹಾಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡಪ್ಪ ಗಂಗಪ್ಪ ಅರಬಳ್ಳಿ, ಲಕ್ಕಪ್ಪ ಬಸಪ್ಪ ಹಳ್ಳಿ, ಬರಮೋಜಿ ಗಂಗಪ್ಪ ಅರಬಳ್ಳಿ, ಬಸವಂತ್ ಬಸವಣ್ಣಿ ಕರವಿನಕೊಪ್ಪ ಇವರು ಈ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದಾರೆ.
ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಬಳಿ ಎರಡು ಗುಂಪುಗಳಲ್ಲಿ ಹೊಡೆದಾಟ ನಡೆದಿತ್ತು. ಈ ಹೊಡೆದಾಟದಲ್ಲಿ ಮುದಕಪ್ಪ ಅಂಗಡಿ ಎನ್ನುವ ಯುವಕ ಮೃತಪಟ್ಟಿದ್ದನು. ಅಲ್ಲದೆ ಇನ್ನು 7 ಜನರು ತೀವ್ರವಾಗಿ ಗಾಯಗೊಂಡಿದ್ದರು.
ಈ ಹೊಡೆದಾಟದಲ್ಲಿ ತೊಡಗಿ ಓರ್ವನ ಹತ್ಯೆಯನ್ನು ಮಾಡಿರುವ ಈ ನಾಲ್ವರನ್ನು ಬೆಳಗಾವಿ ಪೊಲೀಸ ಆಯುಕ್ತರ ಹಾಗೂ ಉಪಪೊಲೀಸ ಆಯುಕ್ತರ ಮಾರ್ಗದಲ್ಲಿ ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.