ಕನ್ನಡಾಭಿಮಾನ ತೋರಿಕೆಗಲ್ಲ ಹೃದಯದಲ್ಲಿರಬೇಕು: ಮಠದ

ಕನ್ನಡಾಭಿಮಾನ ತೋರಿಕೆಗಲ್ಲ ಹೃದಯದಲ್ಲಿರಬೇಕು: ಮಠದ

ಲೋಕದರ್ಶನ ವರದಿ 


ಯರಗಟ್ಟಿ 02: ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ ಎಮ್‌.ಎನ್‌.ಮಠದ ಕನ್ನಡ ಅಭಿಮಾನ ತೋರಿಕೆಗೆ ಆಗದೆ ಹೃದಯದಲ್ಲಿರಬೇಕು ಎಂದರು.  

ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ, ಪಟ್ಟಣ ಪಂಚಾಯತ ಮುಖ್ಯಧಿಕಾರಿ ಎಸ್‌.ಎಸ್‌.ಗೋರೋಶಿ, ಕಸಾಪ ಅಧ್ಯಕ್ಷ ರಾಜೇಂದ್ರ ವಾಲಿ, ಕರವೇ ಅಧ್ಯಕ್ಷ ರಫೀಕ.ಡಿ.ಕೆ, ಉಪತಹಶೀಲ್ದಾರ ಎಸ್‌.ಜಿ.ದೊಡಮನಿ, ಕಂದಾಯ ನೀರಿಕ್ಷಕ ವಾಯ್‌.ಎಫ್‌.ಮುರ್ತೆನ್ನವರ, ಮಡಿವಾಳಪ್ಪ ವನ್ನೂರ, ಮಹೇಶ ಅಡ್ಡುಣಗಿ, ವಿಜಯ ಉಪ್ಪಿನ, ಮಂಜುನಾಥ, ಮಲೀಕ, ಶಶೀಧರ, ನಿರ್ವಾಣಿ, ಗ್ರಾಮ ಲೆಕ್ಕಾಧಿಕಾರಿಗಳು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮುಂತಾದವರಿದ್ದರು. 

ಕರವೇ ಘಟಕದಿಂದ : ಕರವೇ ಸದಸ್ಯರು ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಮೂರ್ತಿಗೆ ಮಾಲಾರೆ​‍್ಣ ಮಾಡಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದರು.ಕರವೇ ಅಧ್ಯಕ್ಷ ರಪೀಕ ನೇತ್ರತ್ವದಲ್ಲಿ ಸರಕಾರಿ ಸಮುದಾ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ಹಾಲೂ ವಿತರಿಸಿದರು. 

ಹೆಸ್ಕಾಂ ಕಛೇರಿಯಲ್ಲಿ : ಪಟ್ಟಣದ ಹೆಸ್ಕಾಂ ಕಛೇರಿಯಲ್ಲಿ 66ನೇ ಕನ್ನಡ ರಾಜ್ಯೋತ್ಸವ ಜರುಗಿತು. ಶಾಖಾಧೀಕಾರಿ ಟಿ.ಕೆ.ಹಳ್ಳಿ, ಮಂಜುನಾಥ ಕುಂಬಾರ, ರಾಜು ತೊರಗಲ್, ಬಸವರಾಜ ಗಾಣಗೇರ, ಕರೆಪ್ಪ ಸೂರನ್ನವರ, ಮಹಾಂತೇಶ ಅಂಗಡಿ, ಮಲ್ಲಿಕಾರ್ಜುನ ಹಳೆಮನಿ, ಯಲ್ಲಾಲಿಂಗ, ಮೋದಿ, ಹೊಸಮನಿ, ಕಲ್ಮೇಶ, ಬಾಳೇಶ, ಸುಬಾನಿ ಮುಂತಾದವರಿದ್ದರು. 

ಯರಗಟ್ಟಿ ಸರಕಾರಿ ಮಾದರಿ ಶಾಲೆಯಲ್ಲಿ : ಪಟ್ಟಣದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ 66ನೇ ಕನ್ನಡ ಆಜ್ಯೋತ್ಸವ ಆಚರಿಸಲಾಯಿತು. ಎಸ್‌ಡಿಎಮ್‌ಸಿ ಅಧ್ಯಕ್ಷೆ ಸೃಷ್ಠಿ ಪಟ್ಟಣಶೆಟ್ಟಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮುಖ್ಯ ಶಿಕ್ಷಕ ಶಿವಾನಂದ ಮಿಕಲಿ, ಪುಟ್ಟು ನಧಾಫ, ಎಸ್‌.ಬಿ.ಪಾಣಿಶೆಟ್ಟಿ, ಹುಣಶಿಕಟ್ಟಿ, ಪೂಜೇರ, ಸರದಾರ, ಹಲಗಲಿ, ಹಂಪಿಹೊಳಿ, ಚಂದರಗಿ, ನಧಾಪ, ಕೊಟಗಿ, ಹೊಸಮನಿ, ಭಜಂತ್ರಿ ಮುಂತಾದವರಿದ್ದರು. 

ಬೂದಿಗೊಪ್ಪ ಗ್ರಾಮದಲ್ಲಿ : ಸಮೀಪದ ಬೂದಿಗೊಪ್ಪ ವೇದಿಕ್ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳು ಕಿತ್ತೂರ ರಾಣಿ ಚನ್ನಮ್ಮ, ಒನಕೆ ಒಬವ್ವ, ಬೆಳವಡಿ ಮಲ್ಲಮ್ಮ, ಅಕ್ಕಮಾಹಾದೇವಿ, ಸಂಗೋಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಕುವೆಂಪು, ಬಸವಣ್ಣ ಮುಂತಾದವರ ವೇಷ ಭೂಷಣಗಳನ್ನು ಹಾಕಿ ರಾಷ್ಟ್ರನಾಯಕರನ್ನು ನೆನೆಪಿಸಿದರು. ಪ್ರಕಾಶ ಕಬ್ಬೂರ, ಎಫ್‌.ಬಿ.ಅಂಚಿ, ಆಯ್‌.ಎಮ್‌.ಪಟ್ಟಿಹಾಳ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ