ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ
ಲೋಕದರ್ಶನ ವರದಿ
ಯಲಬುರ್ಗಾ 17: ಪಟ್ಟಣದ ಶ್ರೀ ಬಸವಲಿಂಗೇಶ್ವರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಲ್ಲಿ ಸಂಸ್ಥೆಯ ಅಧ್ಯಕ್ಷರು ಹಾಗೂ ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿಗಳಾದ ಶ್ರೀ. ಷ. ಬ್ರ. ಶ್ರೀ ಬಸವಲಿಂಗೇಶ್ವರ ಮಹಾಸ್ವಾಮಿಗಳು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ,
ದೇಶಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕರೆ ಈಗಿನ ಕಲ್ಯಾಣ ಕರ್ನಾಟಕ ಹಿಂದಿನ ಹೈದರಾಬಾದ್ ಕರ್ನಾಟಕ ಭಾಗಕ್ಕೆ 1948ರ ಸೆ.17ರಂದು ಸ್ವಾತಂತ್ರ್ಯ ದೊರಕಿತು. ಹೈದರಾಬಾದ್ ನಿಜಾಮನಿಂದ ಈ ಭಾಗ ವಿಮೋಚನೆಗೊಂಡಿದ್ದರಿಂದ ಪ್ರತಿವರ್ಷ ಸೆ.17ರಂದು ವಿಮೋಚನಾ ದಿನ ಹಾಗೂ ಈಗ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ. ಬಿ.ಎಸ್.ಯಡಿಯೂರ್ಪ ಸಿಎಂ ಆಗಿದ್ದಾಗ ಹೈದರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರಿಸಿದ್ದರು. ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಮಾರಿ್ಡಸಿದ್ದರು ಎಂದರು. ಶ್ರೀ ಗುರುಶಾಂತವೀರ ಮಹಾಸ್ವಾಮಿಗಳು ಮೇಲ್ಗದ್ದಿಗೆ ಮಠ ಮಾತನಾಡಿ ಕಲ್ಯಾಣ ಕರ್ನಾಟಕದ ವಿಮೋಚನಾ ದಿನ ಆಚರಿಸುವ ಮಹತ್ವ ಮತ್ತು ಅನುಭವಿಸಿದ ಶ್ರಮವನ್ನು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು.ನಂತರ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯನಿಯರಾದ ಸುನೀತಾ ಪತಂಗರಾಯ, ಹಿರಿಯ ಶಿಕ್ಷಕ ಬಸಪ್ಪ ಹುನುಗುಂದ, ಚಾಂದಬಿ ಕಾಯಿಗಡ್ಡಿ, ಸುಜಾತ ಬಳೋಟಗಿ, ಪ್ರವೀಣ್ ತೆಗ್ಗಿನಮನಿ ಹಾಗೂ ಇನ್ನಿತರ ಸಹಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.