ಇಲಾಖೆ ಅಧಿಕಾರಿಗಳಿಗೆ ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ | ಕೆಡಿಪಿ ಸಭೆ
ಸಭೆಗೆ ಸಮಗ್ರ ಮಾಹಿತಿ ನೀಡುವಲ್ಲಿ ವಿಫಲವಾದರೆ ನಿರ್ದಾಕ್ಷಿಣ್ಯ ಕ್ರಮ
ರಾಮದುರ್ಗ 18: ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಅಡಿ 17/18 ನೇ ಸಾಲಿನಲ್ಲಿ ಮಂಜೂರಾದ 378 ಕೋಟಿ ರೂ. ಕಾಮಗಾರಿಯಲ್ಲಿ ಕೇವಲ ರೂ. 115 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ, ಉಳಿದ 263 ಕೋಟಿ ರೂ. ಕಾಮಗಾರಿಗೆ ಮರು ಟೆಂಡರ ಕರೆದು ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಲು ಇಲಾಖೆ ಅಧಿಕಾರಿಗಳು ಕ್ರಮಕೈಕೊಳ್ಳಬೇಕು ವಿಳಂಬವಾದರೆ ಕ್ರಮಕೈಕೊಳ್ಳಲಾಗುವುದು ಶಾಸಕ ಮಹಾದೇವಪ್ಪ ಯಾದವಾಡ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಹಮ್ಮಿಕೊಂಡ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಸಭೆಗೆ ಸಮಗ್ರ ಮಾಹಿತಿ ನೀಡುವಲ್ಲಿ ವಿಫಲವಾದರೆ ನಿದ್ರಾಕ್ಷಣ್ಯವಾಗಿ ಕ್ರಮಕೈಕೊಳ್ಳಲಾಗುವುದು ಇದು ಕೊನೆಯದಾದ ಸೂಚನೆ ಎಂದು ಎಲ್ಲ ಇಲಾಖೆ ಅಧಿಕಾರಿಗಳಿಗೆ ಕಿವಿಮಾತನ್ನಾಡಿದರು.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ರೈತರಿಗೆ ಬಾಳಿಗೆ ಬೆಳಕು ನೀಡುವುದಾಗಿವೆ. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದಾ ರೈತರು ಸರಕಾರದಿಂದಾ ಪಡೆಯುವ ಸೌಲಭ್ಯದಿಂದಾ ವಂಚಿತರಾಗತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿ ಮುಂದೆ ಇದೆ ಸ್ಥಿತಿ ಮುಂದುವರೆದರೆ ಇಲಾಖೆ ವತಿಯಿಂದಾ ತನಿಖೆ ಮಾಡಿಸಿ ಸೂಕ್ತ ಕ್ರಮ ಕೈಕೊಳ್ಳವಾಗುವುದು ಎಂದು ನುಡಿದರು.. ಸಾಲಾಪೂರ ಏತ ನೀರಾವರಿ ಯೋಜನೆ ಅಡಿ ರೂ. 560 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಲುವೆಯ ಸರ್ವೇ ಕಾರ್ಯವು ಪ್ರಾರಂಭವಾಗಿದೆ ಎಂದು ಕೌಜಲಗಿ ಜಿಆರ್ ಬಿ ಸಿ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಪಾಟೀಲ ತಿಳಿಸಿದರು.
ಕೊವಿಡ್ ಸಾಂಕ್ರಾಮಿಕ ರೋಗದಿಂದಾ ನಷ್ಟ ಅನುಭವಿಸಿದ ತರಕಾರಿ ಬೇಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದಾ ಒಟ್ಟು 406 ಜನರಿಗೆ ರೂ. 28 ಲಕ್ಷ, ಹೂವಿನ ಬೆಳೆಗಾರ 18 ಜನರಿಗೆ ರೂ. 84 ಸಾವಿರ ಮತ್ತು 196 ಜನ ಹಣ್ಣು ಬೆಳೆಗಾರರಿಗೆ ರೂ. 14 ಲಕ್ಷ ಪರಿಹಾರವನ್ನು ನೀಡಲಾಗಿದೆ ಎಂದು ತೋಟಗಾರಿಗೆ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಕೋಡ ತಿಳಿಸಿದರು.
ಕಳ್ಳಭಟ್ಟಿ ತಯಾರಿಕೆ ಘಟಕಗಳ ಮೇಲೆ ದಾಳಿ ಮಾಡಿ ಸಂಪೂರ್ಣ ನಿಯಂತ್ರಿಸುವಲ್ಲಿ ಇಲಾಖೆ ಸಿದ್ದವಿದೆ, ಸಿಎಲ್ 2-15, ಸಿಎಲ್ 9- 7 ಸಿಎಲ್ 7-3 ಎಮ್ ಎಸ್ ಎಲ್ 5 ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ ಅಬಕಾರಿ ಇಲಾಖೆ ಅಧಿಕಾರಿಗಳು ತಿಳಸಿದರು. ಜಿಲ್ಲಾ ಪಂಚಾಯತ ಸದಸ್ಯರಾದ ಮಾರುತಿ ತುಪ್ಪದ, ಜಹೂರ ಹಾಜಿ ಹಾಗೂ ದ್ಯಾವಕ್ಕ ಬೆಳವಡಿ ಎಪಿಎಮ ಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.