ಇಂಡಿ

ಪತ್ರಕರ್ತರಿಗೆ ತಾಂಬಾ ಗ್ರಾಪಂ ಅಧ್ಯಕ್ಷರಿಂದ ಜೀವಬೆದರಿಕೆ

ಪತ್ರಕರ್ತರಿಗೆ ತಾಂಬಾ ಗ್ರಾಪಂ ಅಧ್ಯಕ್ಷರಿಂದ ಜೀವಬೆದರಿಕೆ

ಇಂಡಿ 17: ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೊವಿಡ 19 ಬಗ್ಗೆ ಜಾಗೃತ ಮುಡಿಸಲ್ಲು ನಿರ್ಲಕ್ಷ್ಯ ಧೋರಣೆ ಮಾಡಿದ್ದಾರೆ ಎಂದು ಮೇ.13ರಂದು ಸುದ್ದಿಯನ್ನು ಪ್ರಕಟಣೆ ಮಾಡಲಾಗಿತ್ತು.  

ಸುದ್ದಿ ಪ್ರಕಟಣೆ ಮಾಡಿದ ಬಗ್ಗೆ ತಾಂಬಾ ಗ್ರಾಪಂ ಅಧ್ಯಕ್ಷ ರಾಚ್ಚಪ್ಪ ಗಳೇದ ಪತ್ರಕರ್ತರಾದ ಅಲ್ಲಾಬಕ್ಷ ಗೋರೆ (ಧಡೇದ) ಇವರನ್ನು  ಜೀವ ಬೇದರಿಕೆ ಹಾಗೂ ಅವಚ್ಯ ಶಬ್ದಗಳಿಂದ ಮಾತನಾಡಿದ್ದಾರೆ.  

ಈ ಸಂದರ್ಭದಲ್ಲಿ ಮಾತನಾಡಿದ ಇಂಡಿ ಡಿವೈಎಸ್‌ಸ್ಪಿ ಶ್ರೀಧರ ದೊಡ್ಡಿ ಅವರು ಕೊಡಲೆ ತಾಂಬಾ ಗ್ರಾಮ ಪಂಚಾಯತ ಅಧ್ಯಕ್ಷರನು ಕಾನೂನು ಸುವ್ಯವಸ್ಥೆಯಲ್ಲಿ ಕ್ರಮವನ್ನು ಕೈಗೊಳಲಾಗುವುದು ಎಂದು ಭರವಸೆಯನ್ನು ನೀಡಿದರು. 

ಲಾಲಸಿಂಗ ರಾಠೋಡ ಅಧ್ಯಕ್ಷರು ಕರ್ನಾಟಕ ಕಾರ್ಯಾನಿರತ ಪತ್ರಕರ್ತ ಇಂಡಿ ಇವರು ಇಂಥಾ ವ್ಯಕ್ತಿ ನಮ್ಮಂಥಾ ಮದ್ಯಮ ವರ್ಗದ ಕುಟುಂಬಸ್ಥ ಇರುವ ನಮ್ಮ ಪತ್ರಕರ್ತರನ್ನು ಇವರು ಯಾವ ಹೋತ್ತು ಹೊಂಡಿಯುತ್ತಾರು ಗೋತ್ತಿಲ್ಲ. ಹಾಗೂ ಗ್ರಾಮೀಣ ಪ್ರದೇಶದ ಪತ್ರಕರ್ತರನ್ನು ಕಗ್ಗೊಲೆ ಮಾಡಬೇಕೆಂದು ಜನಪ್ರತಿನಿಧಿಗಳು ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.  

ಭಾರತ ದೇಶದ ಸಂವಿಧಾನದಲ್ಲಿ ಪತ್ರಿಕ ರಂಗವು ನಾಲ್ಕನೇ ಅಂಗವಾಗಿದೆ ಈ ರೀತಿ ಗ್ರಾಮಿಣ ಪ್ರದೇಶದ ಪತ್ರಕರ್ತರನ್ನು ಜೀವ ಬೆದರಿಕೆಯನ್ನು ನೀಡಿರುವ ರಾಚ್ಚಪ್ಪ ಗಳೇದ ಹಾಗೂ ಅವರ ಸಹಚರರನ್ನು ಕೊಡಲೆ ಬಂದನ ಮಾಡಿ ಸೊಕ್ತ ಕಾನೂನು ಕ್ರಮವನ್ನು ಕೈಗೊಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ಮಾಡಬೇಕಾಗುತ್ತೆ ಎಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಲಾಲಸಿಂಗ್ ರಾಠೋಡ್ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇಂಡಿ, ಖಾಜು ಸಿಂಗೆಗೋಳ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಇಂಡಿ, ಅಬುಶ್ಯಾಮ್ ಹವಾಲ್ದಾರ್ ಕಾರ್ಯದರ್ಶಿಗಳು ಇಂಡಿ ಘಟಕ, ನಾಗರಾಜ ಆಸಂಗಿ ಖಂಜಾಚ್ಚಿ, ಅಲ್ಲಾಬಕ್ಷ ಗೋರೆ(ಧಡೇದ). ಅರವಿಂದ ಖಡೆಖಡೆ, ಸದ್ದಾಹುಸೇನ ಜಮಾದಾರ, ಲಕ್ಷ್ಮಣ ಹಿರೇಕುರಬುರ, ವಿನೊಂದ್ ಸಿಂಗೆ, ಶಿವಯ್ಯಾ ಮಠಪತ್ತಿ, ಜೈಭೀಮ ಸಿಂಗೆ,ಉಮೇಶ ಕೋಳೆಕ್ಕರ್, ಎಸ್‌.ಎಂ. ಬಿರಾದಾರ ಹಾಗೂ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ