ಸಿದ್ಧೇಶ್ವರ ಶ್ರೀಗಳಿಂದ ಜೋರಾಪೂರರ ದಶಾವತಾರ ಕೃತಿ ಬಿಡುಗಡೆ
ಲೋಕದರ್ಶನ ವರದಿ
ನಿಪ್ಪಾಣಿ 26 : ನಿಪ್ಪಾಣಿಯ ಸಮಾಧಿ ಮಂಟಪದಲ್ಲಿ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮಿಜಿಯವರು ಇತ್ತೀಚೆಗೆ ಡಾ. ಸಿ. ಕೆ. ಜೋರಾಪೂರ ವಿರಚಿತ “ದಶಾವತಾರ” ಎಂಬ ಗ್ರಂಥವನ್ನು ಲೋಕಾರೆ್ಣ ಗೊಳಿಸಿದರು.
ಒಂದುನೂರಾ ಎಂಟು ಸಾಲುಗಳಿಂದ ನಿರ್ಮಿತವಾದ ಶ್ರೀಮನ್ ನಾರಾಯಣ ಅಷ್ಟೋತ್ತರ ಶತಮಾವಳಿಯ ಅರ್ಥವನ್ನು ಸರಳ ಕನ್ನಡದಲ್ಲಿ, ಸಾಮಾನ್ಯರಿಗೂ ತಿಳಿಯುವಂತೆ ಡಾ. ಸಿ. ಕೆ. ಜೋರಾಪೂರ ಅವರು ರಚಿಸಿದ್ದಾರೆ 500 ಪುಟಗಳ ಈ ಕೃತಿಯು ಸರ್ವಕಾಲಕ್ಕೂ ವಂದ್ಯವಾದವಾಗಿದೆ. ಈ ಗ್ರಂಥದಲ್ಲಿ ವಿಷ್ಣು ಭಗವಾನನ ಹತ್ತು ಅವತಾರಕ್ಕೆ ಕಾರಣ ಹಾಗೂ ಮತ್ಸ್ಯಾವತಾರದಿಂದ ಹಿಡಿದು ಕಲ್ಕಿ ಅವತಾರದ ವರೆಗಿನ ಉತ್ಕೃಷ್ಠವಾದ ಕಥೆಗಳಿಂದ ಒಡಗೂಡಿದ ಈ ಕೃತಿಯು ಓದುಗರನ್ನು ಸೆರೆಹಿಡಿಯುತ್ತದೆ ಎಂದು ಶ್ರದ್ಧಾನಂದ ಸ್ವಾಮೀಜಿಯವರು ಹೇಳಿದರು.
ಅವರು ವ್ಯಾಸರಿಂದ, ಕುಮಾರವ್ಯಾಸರಿಂದ ಹಿಡಿದು ಅನೇಕ ಅಪರೋಕ್ಷ ಜ್ಞಾನಿಗಳ ಸಾರವನ್ನು ತಮ್ಮದೆ ಆದ ಶೈಲಿಯಲ್ಲಿ ಗ್ರಂಥದಲ್ಲಿ ನಿರೂಪಿಸಲಾಗಿದೆ.
ಜೋರಾಪೂರರವರ “ದಶಾವತಾರ” ಗ್ರಂಥವನ್ನು ಅನೇಕ ಸ್ವಾಮಿಜಿಯವರ ಸಮ್ಮುಖದಲ್ಲಿ, ಅಸಂಖ್ಯಾತ ಶ್ರೋತೃಗಳ ಉಪಸ್ಥಿತಿಯಲ್ಲಿ ಪೂಜ್ಯರು ಬಿಡುಗಡೆಗೊಳಿಸಿದರು.
ಲೇಖಕ ಜೋರಾಪೂರ ಅವರನ್ನು ಮತ್ತು ಗ್ರಂಥ ಪ್ರಕಟಣೆಗೊಳಿಸಿದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಅಣ್ಣಾಸಾಹೇಬ ಜೊಲ್ಲೆಯವರನ್ನು ಸ್ವಾಮಿಜಿಯವರ ಪರವಾಗಿ ಮತ್ತು ಪ್ರಹ್ಲಾದ ಪ್ರಕಾಶನದ ಪರವಾಗಿ ಸನ್ಮಾನಿಸಲಾಯಿತು. ರಮೇಶ ಪಾಟೀಲ ನಿರೂಪಿಸಿದರು.