ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಶಿಕಲಾ ಜೊಲ್ಲೆ ಭೂಮಿಪೂಜೆ

ಮಾಂಜರಿ 24: ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಮಂಜೂರಾದ 2 ಕೋಟಿ ರೂ ಮೊತ್ತದಲ್ಲಿ, ಕಾರದಗಾ ಗ್ರಾಮದಿಂದ ಮಹಾರಾಷ್ಟ್ರ ರಾಜ್ಯದ ಗಡಿಯವರೆಗೆ 3.80 ಕೀ. ಮೀ ರಸ್ತೆ ಅಭಿವೃದ್ದಿ ಕಾಮಗಾರಿಗೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಯವರು ಭೂಮಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. 

ಉತ್ತಮ ರಸ್ತೆಗಳಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು, ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಮಾಜಿ ತಾ. ಪಂ.ಸದಸ್ಯರಾದ ದಾದಾಸೋ ನರಗಟ್ಟೆ, ಸತ್ಯಪ್ಪ ಮಾಳಿ, ಮಾಜಿ ಎಪಿಎಂಸಿ ಸದಸ್ಯರಾದ ನೀತೇಶ ಖೋತ, ಗ್ರಾ.ಪಂ. ಸದಸ್ಯರಾದ ಸೋಮನಾಥ ಗಾವಡೆ, ಧನಪಾಲ ಚವ್ಹಾಣ್, ರೇಶ್ಮಾ ಜಮಾದಾರ, ಸುಶ್ಮಾ ಗವಳಿ, ವೈಶಾಲಿ ಖರಾಡೆ, ಸುಕಮಾರ ಮಾಳಿ, ಅರವಿಂದ ಖರಾಡೆ, ಬಾಬಾಸಾಬ ಖರಾಡೆ, ಅವನ್ನಾ ಗಾವಡೆ, ಸ್ಥಳೀಯ ಮುಖಂಡರುಗಳು, ಗಣ್ಯರು ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು