ಸಂಚಾರಿ ಪಶು ಆಸ್ಪತ್ರೆ ವಾಹನಕ್ಕೆ ಜೊಲ್ಲೆ ದಂಪತಿ ಚಾಲನೆ

ಲೋಕದರ್ಶನ ವರದಿ

 ಮಾಂಜರಿ 24: ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯ ರೈತರ ಮನೆ ಬಾಗಿಲಿಗೆ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ, ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ತಾಲುಕಿನ ಭಿವಶಿ ಗ್ರಾಮದಲ್ಲಿ ಸಂಚಾರಿ ಪಶು ಆಸ್ಪತ್ರೆ ವಾಹನಕ್ಕೆ ಮುಜರಾಯಿ, ಹಜ ಮತ್ತು ವಕ್ಫ್ ಇಲಾಖೆಯ ಸಚಿವ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಇಂದು ಪೂಜೆ ಸಲ್ಲಿಸಿ, ಲೋಕಾರ್ಪಣೆ ಮಾಡಿದರು.

ಈ ಯೋಜನೆಯನ್ನು ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿದ್ದು, ಪಶುಸಂಗೋಪನೆ ಇಲಾಖೆಯ ಟೋಲ್ ಪ್ರೀ ನಂಬರ್ 1962ಗೆ ಕರೆ ಮಾಡುವ ಮೂಲಕ ಜಾನುವಾರು ಮಾಲೀಕರು ಪಶು ಆಸ್ಪತ್ರೆ ಸೌಲಭ್ಯ ಪಡೆಯಬಹುದು. ಇದರಲ್ಲಿ ಪ್ರಾಥಮಿಕ ಚಿಕಿತ್ಸೆಯೊಂದಿಗೆ, ಸಣ್ಣ ಪುಟ್ಟ ಶಸ್ತ್ರಚಿಕಿತ್ಸೆಗಳ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಪಶು ಇಲಾಖೆಯ ಸಹಾಯಕ ನಿರ್ದೇಶಕ  ಜಯಕುಮಾರ ಕಂಕಣವಾಡೆ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದು ನರಾಟೆ, ಗ್ರಾಮ ಪಂಚಾಯತಿ ಅಧ್ಯಕ್ಷ ಅರ್ಚನಾ ಕೊಗನೊಳೆ, ಉಪಾಧ್ಯಕ್ಷ ಸುಜಾತಾ ಚೌಗುಲೆ, ಸದಸ್ಯರು, ಪ್ರಿಯಾ ಜ್ಯೋತಿಪ್ರಸಾದ ಜೊಲ್ಲೆ, ಸ್ಥಳೀಯ ಮುಖಂಡರು, ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.