ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ
ಯಲಬುರ್ಗಾ 25: ಅನಕ್ಷರತೆ ಮತ್ತು ಆರ್ಥಿಕ ಸಮಸ್ಯೆಯೇ ಬಾಲಕಾರ್ಮಿಕ ಪದ್ಧತಿಗೆ ಮೂಲ ಕಾರಣವಾಗಿದ್ದು, ಸರಕಾರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದು ಮಕ್ಕಳ ಸರ್ವಾಂಗೀಣ ವಿಕಸನಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ದತಿ ವಿರುದ್ದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಎಂದು ಸತೀಶ ಹೆಗಡೆ ಕರೆ ನೀಡಿದರು.
ಪಟ್ಟಣದ ಯು.ಪಿ.ಎಲ್.ಲಿಮಿಟೆಡ್ ಆಫೀಸ್ನಲ್ಲಿ ಅಡ್ವಾಂಟ್ ಕಂಪನಿ ವತಿಯಿಂದ ಬಾಲಕಾರ್ಮಿಕ ವಿರುದ್ದ ಏಕೀಕರಣ ಕಾರ್ಯಕ್ರಮವನ್ನು ಸತೀಶ ಹೆಗಡೆ ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಎಲ್ಲರಹೊಣೆಯಾಗಿದೆ ಬಾಲಕಾರ್ಮಿಕರಲ್ಲಿ ಶೇ. 60,70 ಕುಟುಂಬದೊಂದಿಗೆ ವ್ಯವಸಾಯದಲ್ಲಿ ನಿರತಕಾರ್ಮಿಕರೇ ಹೆಚ್ಚಾಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಯಲಬುರ್ಗಾ, ಬಿರಾದಾರ ಕಾರ್ಮಿಕ ನೀರಿಕ್ಷಕರು ಶಿವಶಂಕ್ರಪ್ಪ ತಳವಾರ, ಕೊಟೇಶ ಬಸವರಾಜ ಹಿರೇಗೌಡರ, ಮಾತನಾಡಿದರು. ಯಲಬುರ್ಗಾ ತಾಲೂಕನ್ನು ಬಾಲಕಾರ್ಮಿಕ ಮುಕ್ತ ತಾಲೂಕನ್ನಾಗಿಸಲು ಇಲಾಖೆಯು ಅನೇಕಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.2017-18ರಲ್ಲಿ ಅಪಾಯಕಾರಿಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಅನೇಕ ಮಕ್ಕಳನ್ನುರಕ್ಷಿಸಿ ಬಾಲಕಾರ್ಮಿಕ ಶಾಲೆಗೆ ಸೇರಿಸಿದ್ದಲ್ಲದೆ ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಪ್ರಕರಣ ಹೂಡಲಾಗಿದೆ ನ್ಯಾಯಾಲಯದಲ್ಲಿ ಎಂದರು.ರೀಜನಲ್ ಮ್ಯಾನೇಜರ ಅಡ್ವಾಟ್ ಶ್ರೀಕಾಂತ.ಕೆ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಸ.ಹಿ.ಪ್ರಾ.ಶಾ ಕುಡಗುಂಟಿ ಶಿಕ್ಷಕರು ಶರಣಪ್ಪ ಇಟಗಿ ನಿರೂಪಣೆ ಮಾಡಿದರು.ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿರುಪಾಕ್ಷಯ್ಯ ಹಿರೇಮಠ,ಲಲಿತಾ ನಾಯಕ್, ಗಿರೀಶ ಪಾಲನಕರ, ಸುರೇಶಬಿರಾದಾರ, ಶ್ರೀಕಾಂತ, ಉಮೇಶ ಹಡಪದ್,ಕೊಟೇಶ, ನಿಂಗರಾಜ ಬಿಸನಹಳ್ಳಿ ಸೇರಿ ಮತ್ತಿತರರುಇದ್ದರು.