ಅಂತರರಾಷ್ಟ್ರೀಯ

ಸಾಕು ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ ಜೋ ಬೈಡನ್

ಸಾಕು ನಾಯಿ ಜೊತೆ  ಆಟವಾಡುವಾಗ ಜಾರಿ ಬಿದ್ದು ಗಾಯಗೊಂಡ   ಜೋ ಬೈಡನ್

ವಾಷಿಂಗ್ಟನ್, ನವೆಂಬರ್ 30:  ಅಮೆರಿಕಾದ  ನಿಯೋಜಿತ  ಅಧ್ಯಕ್ಷ  ಜೋ ಬೈಡೆನ್    ತಮ್ಮ   ಸಾಕು ನಾಯಿಯೊಂದಿಗೆ ಆಟವಾಡುವಾ  ಕೆಳಗೆ ಬಿದ್ದು  ಗಾಯಗೊಂಡಿದ್ದಾರೆ.  ಈ ಘಟನೆ    ವಾಷಿಂಗ್ಟನ್‌ನಲ್ಲಿ ನಡೆದಿದೆ.

78ವರ್ಷದ  ಹಿರಿಯ   ಜೋ ಬೈಡೆನ್  ಅವರಿಗೆ  ನಾಯಿಗಳೆಂದರೆ    ಹೆಚ್ಚು ಪ್ರೀತಿ.  ಹಾಗಾಗಿ ಜರ್ಮನ್ ಶೆಫರ್ಡ್ ನಾಯಿಗಳನ್ನು  ಸಾಕುತ್ತಿದ್ದಾರೆ.

ಬೆಳಿಗ್ಗೆ  ಜಾಗಿಂಗ್  ಸಮಯದಲ್ಲಿ   ತಮ್ಮ ಸಾಕು ನಾಯಿ ಜರ್ಮನ್ ಶೆಫರ್ಡ್  ಜೊತೆ  ಜಾಗಿಂಗ್ ನಲ್ಲಿ   ಆಟವಾಡುತ್ತಿದ್ದಾಗ   ಕೆಳಗೆ ಜಾರಿಬಿದ್ದು  ಕಾಲಿಗೆ ಗಾಯಮಾಡಿಕೊಂಡಿದ್ದಾರೆ.  ಇದರಿಂದ  ಡೆಲಾವರ್ ನಲ್ಲಿರುವ  ಮೂಳೆ ತಜ್ಞ  ವೈದ್ಯರೊಬ್ಬರಿಂದ  ಚಿಕಿತ್ಸೆ ಪಡೆದುಕೊಂಡಿದ್ದಾರೆ  ಎಂದು ಬೈಡೆನ್ ಕಚೇರಿ ತಿಳಿಸಿದೆ.

ಜೋ ಬಿಡನ್ ಎರಡು ನಾಯಿಗಳನ್ನು ಸಾಕಿದ್ದಾರೆ.  ಅದರಲ್ಲಿ 2018 ರಲ್ಲಿ ದತ್ತು ಪಡೆದ ಮಜೋರ್ಟೊ ಎಂಬ ನಾಯಿಯೊಂದಿಗೆ ಆಟವಾಡುತ್ತಿದ್ದಾಗ ಅವರು ಜಾರಿಬಿದ್ದು ಗಾಯಗೊಂಡಿದ್ದಾರೆ. ಬಿಡೆನ್ 2008 ರಲ್ಲಿ  ಮತ್ತೊಂದು  ನಾಯಿಯನ್ನು ದತ್ತು ತೆಗೆದುಕೊಂಡಿದ್ದರು.   ಸದ್ಯದಲ್ಲೇ  ಬೈಡನ್ ಅಮೆರಿಕಾ  ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದು,  ತಮ್ಮೊಂದಿಗೆ  ಎರಡು ಸಾಕು ನಾಯಿಗಳನ್ನೂ  ಶ್ವೇತಭವನಕ್ಕೆ ಕರೆದೊಯ್ಯಲಿದ್ದಾರೆ.

ಸುದ್ದಿ ಓದಿ