ಬೆಳಗಾವಿಯ ರೈತಪರ ಹೋರಾಟಗಾರ್ತಿ ಜಯಶ್ರೀ ಗುರಣ್ಣನವರ ಅವರಿಗೆ ಬೆಂಗಳೂರಿನಲ್ಲಿ "ಕಾಯಕ ರತ್ನ 2022" ಪ್ರಶಸ್ತಿ ಪ್ರದಾನ

ಬೆಳಗಾವಿಯ ರೈತಪರ ಹೋರಾಟಗಾರ್ತಿ ಜಯಶ್ರೀ ಗುರಣ್ಣನವರ ಅವರಿಗೆ ಬೆಂಗಳೂರಿನಲ್ಲಿ "ಕಾಯಕ ರತ್ನ 2022" ಪ್ರಶಸ್ತಿ ಪ್ರದಾನ

ಬೆಳಗಾವಿ, ಅ, 8 : ಬೆಂಗಳೂರಿನ  ರಾಷ್ಟ್ರೀಯ ಬಸವ ಪ್ರತಿಷ್ಠಾನದಿಂದ ಕೊಡಮಾಡುವ "ಕಾಯಕ ರತ್ನ 2022" ಪ್ರಶಸ್ತಿಯನ್ನು ಬೆಳಗಾವಿಯ ರೈತಪರ ಹೋರಾಟಗಾರ್ತಿ ಶ್ರೀಮತಿ ಜಯಶ್ರೀ ಗುರಣ್ಣನವರ ಅವರಿಗೆ ಪ್ರದಾನ ಮಾಡುವ ಮೂಲಕ ಗೌರವಿಸಲಾಗಿದೆ. 

     ಬೆಂಗಳೂರಿನ ರಾಷ್ಟ್ರೀಯ ಬಸವ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 8 ರಂದು  'ಸರ್ವಧರ್ಮ ಸಂಸತ್ 2022' ಸಮ್ಮೇಳನವು ಅರಮನೆ ಮೈದಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಯಶ್ರೀ ಗುರಣನವರ ಸೇರಿದಂತೆ ಅನೇಕ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ರೈತಪರ ಹೋರಾಗಾರ್ತಿ ಜಯಶ್ರೀ ಗುರನವರ ಅವರ ಅನುಪಮ ಸೇವೆಯನ್ನು ಗಮನಿಸಿ ಸೇರಾಷ್ಟ್ರೀಯ ಬಸವ ಪ್ರತಿಷ್ಠಾನದಿಂದ ಕೊಡಮಾಡುವ "ಕಾಯಕ ರತ್ನ 2022' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸುದ್ದಿ ಓದಿ