ಅಧ್ಯಕ್ಷರಾಗಿ ಜಯಶ್ರೀ, ಉಪಾಧ್ಯಕ್ಷರಾಗಿ ಶೋಭಾ ಆಯ್ಕೆ
ಹುಕ್ಕೇರಿ 29: ತಾಲೂಕಿನ ಬೆಳವಿ ಗ್ರಾಮಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಯಿತು. ಬಿಜೆಪಿ ಬೆಂಬಲಿತ ಗ್ರಾಮದ ಮುಖಂಡರಾದ ಸತ್ಯಪ್ಪ ನಾಯಿಕ, ರಮೇಶ ಕುಲಕರ್ಣಿ, ಕಾಡಪ್ಪ ಮಗದುಮ್ಮ ಇವರ ಗುಂಪಿನ ಜಯಶ್ರೀ ಸತ್ಯಾಯಿಗೋಳ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಶೋಭಾ ಮಗದುಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಶುಕ್ರವಾರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು.
ಚುನಾವಣೆ ಅಧಿಕಾರಿಗಳಾಗಿ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಸ್ ಎಸ್ ಹಿರೇಮಠ ಕಾರ್ಯನಿರ್ವಹಿಸಿದರು. 14ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ಸತ್ಯಪ್ಪ ನಾಯಿಕ ಇವರ ಗುಂಪಿನ 9ಸದಸ್ಯರು ಉಳಿದ 5 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸತ್ಯಪ್ಪ ನಾಯಿಕ ಹಾಗೂ ರಮೇಶ ಕುಲಕರ್ಣಿ ಮಾತನಾಡಿ ಸಚಿವ ಉಮೇಶ್ ಕತ್ತಿ ಹಾಗೂ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಜನರ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಕೈಗೊಳ್ಳುವದಾಗಿ ತಿಳಿಸಿದರು.
ಸದಸ್ಯರಾದ ಮುಲ್ತಾನಿ, ಶೋಬಾ ಘಸ್ತಿ, ಚನಮಲ್ಲ ನಾಯಿಕ, ಪಾರ್ವತಿ ಚಿಕ್ಕಣಗಿ, ಜಯಶ್ರೀ ಪಾಟೀಲ, ಮುಖಂಡರಾದ ಕಾಡಪ್ಪ ಮಗದುಮ್ಮ, ಗೋಪಾಲ ಮಗದುಮ್ಮ ಈರಪ್ಪ ಚೌಗಲಾ, ವಕೀಲರಾದ ಎಸ್ ಎಸ್ ಸತ್ಯಾಯಿಗೋಳ.ಪುಂಡಲಿಕ ಪಾಟೀಲ ಕಿರಣ ಹರಗಾಪುರೆ, ಅಜೀತ ನಾಯಿಕ, ಗೋಪಾಲ ಕುಲಕರ್ಣಿ ಭರತೇಶ ನಾಯಿಕ, ಈರಪ್ಪ ಹಡಗಿನಾಳ, ಸುರೇಶ ಖಡಕಭಾವಿ, ಅಪ್ಪಾಸಾಹೇಬ ನಧಾಪ, ಸಾತಪ್ಪ ಕರ್ಕಿನಾಯಿಕ ಸಾತಪ್ಪ ನಾಯಿಕ, ರಾಮಣ್ಣ ಘಸ್ತಿ ಮತ್ತಿತರರು ಉಪಸ್ಥಿತರಿದ್ದರು.