ರಾಜ್ಯಸಭೆಗೆ ಪ್ರಸಾರ ಭಾರತಿ ಮಾಜಿ ಸಿಇಓ ಜವಾಹರ್ ಸಿರ್ಕಾರ್
ನವದೆಹಲಿ, ಜುಲೈ 24 - ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್ ಪಕ್ಷ , ಪ್ರಸಾರ ಭಾರತಿ ಮಾಜಿ ಸಿಇಓ ಜವಹಾರ್ ಸಿರ್ಕಾರ್ ಅವರನ್ನು ಶನಿವಾರ ರಾಜ್ಯಸಭೆಗೆ ನಾಮಕರಣಗೊಳಿಸಿದೆ.
ಸಂಸತ್ತಿನ ಮೇಲ್ಮನೆಯಾಗಿರುವ ರಾಜ್ಯಸಭೆಗೆ ಸಿರ್ಕಾರ್ ಅವರನ್ನು ನಾಮಕರಣಗೊಳಿಸುವ ತನ್ನ ನಿರ್ಧಾರವನ್ನು ಪಕ್ಷದ ಅಧಿಕೃತ ಟ್ವೀಟರ್ ಹ್ಯಾಂಡಲ್ ನಲ್ಲಿ ಪ್ರಕಟಿಸಿದೆ.
ಜವಹಾರ್ ಸಿರ್ಕಾರ್ 42 ವರ್ಷಗಳ ಸಾರ್ವಜನಿಕ ಸೇವೆಸಲ್ಲಿಸಿದ್ದಾರೆ. ಪ್ರಸಾರ ಭಾರತಿಯ ಮಾಜಿ ಸಿಇಓ ಆಗಿದ್ದಾರೆ ಎಂದು ತೃಣ ಮೂಲ ಕಾಂಗ್ರೆಸ್ ಟ್ವೀಟ್ ನಲ್ಲಿ ತಿಳಿಸಿದೆ. ಅವರ ಅಮೂಲ್ಯವಾದ ಸಾರ್ವಜನಿಕ ಸೇವೆಯಿಂದ ದೇಶಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸಲು ನಮಗೆ ನೆರವಾಗಬಹದು ಎಂದು ತಿಳಿಸಿದೆ.