ಜಾವಲಿನ್ ಥ್ರೋ: ನೀರಜ್ ಛೋಪ್ರಾ ಫೈನಲ್ ಗೆ
ಟೋಕಿಯೊ, ಆ.4 ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಛೋಪ್ರಾ ಅವರು ಟೋಕಿಯೊ 2020 ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯ ಫೈನಲ್ ಗೆ ಪ್ರವೇಶ ಪಡೆದಿದ್ದಾರೆ.
ಬುಧವಾರ ನಡೆದ ಸ್ಪರ್ಧೆಯಲ್ಲಿ ನೀರಜ್ ಉತ್ತಮ ಪ್ರದರ್ಶನ ನೀಡಿ ಫೈನಲ್ ಗೆ ಲಗ್ಗೆ ಇಟ್ಟರು. ಮೊದಲ ಎಸೆತದಲ್ಲಿ 86.65 ದೂರ ಎಸೆಯುವ ಮೂಲಕ ಶನಿವಾರ ನಡೆಯಲಿರುವ ಫೈನಲ್ ಗೆ ನೇರ ಅರ್ಹತೆ ಪಡೆದರು. ಇವರು ಎ ಗ್ರುಪ್ ನಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಯತ್ನದಲ್ಲೇ ಫೈನಲ್ ಗೆ ಅರ್ಹತೆ ಪಡೆದಿರುವ ನೀರಜ್ ಪದಕದ ಆಸೆ ಚಿಗುರಿಸಿದ್ದಾರೆ.
ಈ ಸುತ್ತಿನ ಎರಡನೇ ಸ್ಥಾನ ಜರ್ಮನಿಯ ಜೋಹಾನ್ಸ್ ವೆಟರ್ 85.64 ದೂರ ಜಾವಲಿನ್ ಎಸೆದು ಸಾಧನೆ ಮಾಡಿದರು. ಇನ್ನು ಪಾಕ್ ನ ಅರ್ಶದ್ ನದೀಮ್ 85.16 ದೂರ ಎಸೆದು ಮೂರನೇ ಸ್ಥಾನ ಪಡೆದಿದ್ದಾರೆ.
ನೀರಜ್ ಅವರು 88.06 ದೂರ ಎಸೆದು ದಾಖಲೆಯನ್ನು ಹೊಂದಿದ್ದಾರೆ.