ಜಾವಲಿನ್ ಥ್ರೋ: ಅನು ರಾಣಿಗೆ 14ನೇ ಸ್ಥಾನ

ಜಾವಲಿನ್ ಥ್ರೋ: ಅನು ರಾಣಿಗೆ 14ನೇ ಸ್ಥಾನ

 
ಟೋಕಿಯೊ, ಆ.3 - ಭಾರತದ ಭರವಸೆಯ ಅಥ್ಲೀಟ್ ಅನು ರಾಣಿ ಅವರು ಇಲ್ಲಿ ನಡೆದಿರುವ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ 14ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
 
ಸೋಮವಾರ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತದ ಅನು ರಾಣಿ ತಮ್ಮ ಮೂರನೇ ಪ್ರಯತ್ನದಲ್ಲಿ 54.04 ಮೀಟರ್ ದೂರ ಎಸೆದು 14ನೇ ಸ್ಥಾನ ಪಡೆದಿದ್ದಾರೆ. ಇವರು ಮೊದಲ ಯತ್ನದಲ್ಲಿ 50.35 ಹಾಗೂ ಎರಡನೇ ಯತ್ನದಲ್ಲಿ 53.19 ಮೀಟರ್ ದೂರ ಜಾವಲಿನ್ ಎಸೆದರು. ಈ ಮೂಲಕ ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದ ಅನು ರಾಣಿ ಅವರು ಈ ಸ್ಪರ್ಧೆಯ ಫೈನಲ್ ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಇವರು ತಮ್ಮ ಶ್ರೇಷ್ಠ 63 ಮೀಟರ್ ಎಸೆದಿದ್ದರು ಫೈನಲ್ ಗೆ ಪ್ರವೇಶ ಪಡೆಯಬಹುದಿತ್ತು. ಆದರೆ ಒತ್ತಡ ಮೆಟ್ಟಿ ನಿಲ್ಲುವಲ್ಲಿ ಅನು ವಿಫಲರಾಗಿದ್ದಾರೆ.
 
ಈ ಸ್ಪರ್ಧೆಯಲ್ಲಿ ಪೋಲೆಂಡ್, ಆಸ್ಟ್ರೇಲಿಯಾ ಹಾಗೂ ಚೀನಾ ಆಟಗಾರ್ತಿಯರು ಮೊದಲ ಮೂರು ಸ್ಥಾನ ಪಡೆದಿದ್ದಾರೆ.

ಸುದ್ದಿ ಓದಿ