ಜಾವೀದ್ ಭಾಗವಾನ್ ಕಾಂಗ್ರೆಸ್ ನಾಯಕ ಇನ್ನಿಲ್ಲ: ಮಾಜಿ ಸಚಿವೆ ಉಮಾಶ್ರೀ ಕಂಬನಿ
ಮಹಾಲಿಂಗಪುರ: ತೇರದಾಳ ವಿಧಾನಸಭಾ ಕ್ಷೇತ್ರದ ಮಹಾಲಿಂಗಪುರ ನಿವಾಸಿ ಜಾವೀದ್ ಭಾಗವಾನ್ ಕಾಂಗ್ರೆಸ್ ನಾಯಕ ಇನ್ನಿಲ್ಲ ಎಂಬ ಸುದ್ದಿ ತಿಳಿದು ನನಗೆ ಆಘಾತವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಕಂಬನಿ ಮಿಡಿದಿದ್ದಾರೆ.
ಗುರುವಾರ ಸುಧ್ಧಿ ಅರಿತು ಅಂತಜರ್ಾಲದಲ್ಲಿ ಟ್ವೀಟ್ ಮಾಡಿದ ಅವರು ಅಂತರಂಗ ಸದಾಕಾಲ ಶೋಷಿತ ಸಮುದಾಯಗಳ ಪರ ತುಡಿಯುತ್ತಿತ್ತು. ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆ ಅರಿತಿದ್ದ ಅತಿ ಉತ್ತಮ ಸಂಘಟನಾ ಚತುರ, ಸರ್ವ ಜಾತಿ-ಜನಾಂಗದ ನಾಯಕ, ಧಮರ್ಾತೀತ, ಸಹೃದಯಿ, ಸ್ವಾಭಿಮಾನದ ಸಂಕೇತ, ಸೂಕ್ಷ್ಮ ವ್ಯವಹರಿಸುವ ಜಾಣ್ಮೆ, ಮಾತೃಹೃದಯಿ ನಮ್ಮೊಂದಿಗೆ ಇಲ್ಲ ಎಂಬ ನಂಬಿಕೆಯೇ ಬರುತ್ತಿಲ್ಲ.ನೀವು ಹೋಗಬಾರದಿತ್ತು , ಪಕ್ಷ, ಕಾರ್ಯಕರ್ತರಿಗೆ ಅನಾಥ ಭಾವ ಕಾಡುತ್ತಿದೆ.
ಪಕ್ಷ ಸಂಘಟನೆಯಲ್ಲಿ ನಿಮ್ಮ ಪಾತ್ರ ಅನನ್ಯ, ಕೊಡುಗೆ ಅಪಾರ, ಹದಿನೈದು ವರುಷದ ರಾಜಕೀಯ ಜೀವನದಲ್ಲಿ ನನ್ನನ್ನು ಅತ್ಯಂತ ಗೌರವಪೂರ್ವಕವಾಗಿ ಕಂಡದ್ದು ಮರೆಯಲಾಗದು. ನಿಮ್ಮೊಂದಿಗಿನ ಒಡನಾಟದ ನೆನಪು ಸದಾಕಾಲ ನನ್ನ ಜೀವನ ಪಯರ್ಂತ ಅಚ್ಚಹಸಿರಾಗಿ ಉಳಿದಿದೆ.ಹೋಗಿ ಮತ್ತೆ ಬನ್ನಿ ನಿಮ್ಮಹಾಗೆ ಸರ್ವರಿಗೂ ಪ್ರೀತಿ ಹಂಚುವ ಹೃದಯ ಈ ಜಗತ್ತಿಗೆ ಬೇಕು ಎಂದು ಭಾರವಾದ ಹೃದಯದಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೊನೆಯದಾಗಿ ' ನಮಸ್ತೆ ಜಾವೀದ್ ' ಹೋಗಿ ಬಾ ಎಂದು ಟ್ವೀಟ್ ಮಾಡಿದ್ದಾರೆ