ಸಂಭ್ರಮದಿಂದ ಜರುಗಿದ ಜಗದ್ಗುರು ಸಿದ್ಧಾರೂಢರ ಜಲರಥೋತ್ಸವ
ಮಹಾಲಿಂಗಪುರ: ಸ್ಥಳೀಯ ಸಿದ್ಧಾರೂಢ ನಗರದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ಧಾರೂಢರ 94ನೇ ಪುಣ್ಯಾರಾಧನೆಯ ನಿಮಿತ್ಯ 41ನೇ ವರ್ಷದ ಜಲರಥೋತ್ಸವ(ತೆಪ್ಪೋತ್ಸವ)ವು ಶುಕ್ರವಾರ ಸಂಜೆ 5-45 ರಿಂದ 6-30ರವರೆಗೆ ಸಂಭ್ರಮದಿಂದ ಜರುಗಿತು.
ತೆಪ್ಪೋತ್ಸವದ ನಿಮಿತ್ಯ ಮುಂಜಾನೆ 8 ಘಂಟೆಗೆ ಸಿದ್ದಾರೂಢರ ಮೂರ್ತಿಗೆ ಅಭಿಷೇಕ, 10ಘಂಟೆಗೆ ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಅವರಿಂದ ಮುತ್ತೈದೆಯರಿಗೆ ಉಡಿ ತುಂಬುವುದು, ನಂತರ ವಿವಿಧ ಗ್ರಾಮಗಳ ಭಜನಾಮೇಳದವರಿಂದ ಭಜನಾ ಕಾರ್ಯಕ್ರಮಗಳು ಜರುಗಿದವು.
ತೆಪ್ಪೋತ್ಸವದ ಸಮಾರಂಭದ ಸಾನಿಧ್ಯವನ್ನು ಸಹಜಾನಂದ ಸ್ವಾಮಿಜಿ, ಅಧ್ಯಕ್ಷತೆಯನ್ನು ಘಟಪ್ರಭಾ ಭೀಮಾನಂದ ಸ್ವಾಮಿಜಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುನವಳ್ಳಿಯ ಮುಕ್ತಾನಂದ ಸ್ವಾಮಿಜಿ, ಖಜ್ಜಿಡೋಣಿ ಕೃಷ್ಣಾನಂದ ಶಾಸ್ತ್ರಿಗಳು, ರನ್ನಬೆಳಗಲಿ ಸದಾಶಿವ ಗುರೂಜಿ, ಚಿಕ್ಕಪಡಸಲಗಿಯ ಅಕ್ಕಮಹಾದೇವಿತಾಯಿ, ಮತ್ತಿಕಟ್ಟಿಯ ರಾಜೇಶ್ವರಿ ತಾಯಿ, ನಿವರ್ಾನಟ್ಟಿಯ ವಿದ್ಯಾನಂದ ಸ್ವಾಮಿಜಿ, ಹೊಸೂರ ಪರಮಾನಂದ ಸ್ವಾಮಿಜಿ, ಕಂಕನವಾಡಿ ಮಾರುತಿ ಶರಣರು, ಹಿಪ್ಪರಗಿ ಸಿದ್ಧಾರೂಢ ಶರಣರು, ಮಧುರಖಂಡಿಯ ಬಸಯ್ಯಸ್ವಾಮಿಜಿ ಭಾಗವಹಿಸಿದ್ದರು.
ಸಂಜೆ 6 ಗಂಟೆಗೆ ಘಂಟೆಗೆ ಅಲಂಕೃತ ರಥದಲ್ಲಿನ ಸಿದ್ಧಾರೂಢರ ಮೂರ್ತಿಗೆ ಪುರಸಭೆ ಸದಸ್ಯ ರವಿ ಜವಳಗಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ವಿಶಾಲವಾದ ಸಿದ್ದಾಯಿ ಸರೋವರ ಕೆರೆಯಲ್ಲಿ ಜರುಗಿದ ಜಲರಥೋತ್ಸವದಲ್ಲಿ ಅಪಾರ ಭಕ್ತಾಧಿಗಳಿಂದ ಸಿದ್ಧಾರೂಢ ಮಹಾರಾಜಕೀ ಜೈ, ಸಿದ್ದಾರೂಢರ ಜೋಳಗಿ-ಜಗತ್ತಿಗೆಲ್ಲ ಹೋಳಗಿ ಎಂಬ ಜಯಘೋಷಗಳು ಮೊಳಗಿದವು.
ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿಯ ತೆಪ್ಪೋತ್ಸವದ ನಂತರ ಉತ್ತರ ಕನರ್ಾಟಕದಲ್ಲಿ ಜರಗುವ ಎರಡನೇ ದೊಡ್ಡ ತೆಪ್ಪೋತ್ಸವ( ಜಲರಥೋತ್ಸವ) ಇದಾಗಿದೆ. ತೆಪ್ಪೋತ್ಸವ ವೀಕ್ಷಣೆಗಾಗಿ ಬೆಳಗಾವಿ, ಬಾಗಲಕೋಟ, ವಿಜಯಪುರ, ಕಲಬುರ್ಗಿ ಜಿಲ್ಲೆಗಳ ಭಕ್ತಾಗಳು ಆಗಮಿಸಿ ರಥೋತ್ಸವಕ್ಕೆ ನಿಂಬೆಹಣ್ಣು, ಉತ್ತತ್ತಿ, ಹೂ, ಬೆಂಡ, ಬೆತ್ತಾಸಗಳನ್ನು ಹಾರಿಸಿ, ಜಲರಥೋತ್ಸವ ವೀಕ್ಷಿಸಿದರು.
ಸಿದ್ದಾರೂಢ ಟ್ರಸ್ಟ ಕಮೀಟಿ ಉಪಾಧ್ಯಕ್ಷ ಡಾ.ಬಿ.ಡಿ.ಸೋರಗಾಂವಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೋರೆ, ಖಜಾಂಜಿ ಅಲ್ಲಪ್ಪ ಗುಂಜಿಗಾಂವಿ, ಸಹಕಾರ್ಯದರ್ಶಿ ಗುರುಪಾದ ಅಂಬಿ, ಧರ್ಮದರ್ಶಿಗಳಾದ ಮಲ್ಲಪ್ಪ ಕಟಗಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಚೇತನ ಹಾದಿಮನಿ, ಶ್ರೀಮಠದ ಸದ್ಭಕ್ತರಾದ ಮಹಾಂತೇಶ ಘಟ್ನಟ್ಟಿ, ಮಹೇಶ ಇಟಕನ್ನವರ, ಯಲ್ಲನಗೌಡ ಪಾಟೀಲ, ಎಸ್.ಕೆ.ಗಿಂಡೆ, ಮಹಾಲಿಂಗ ಕರೆಹೊನ್ನ, ಚನಬಸು ಹುರಕಡ್ಲಿ, ಚನ್ನಪ್ಪ ಚಂಡೋಲ, ಸುಭಾಸ ನಾಯಕ, ಮಹೇಶ ಬಡಿಗೇರ, ಶಿವಲಿಂಗ ತೇಲಿ, ಶಿವಾನಂದ ಬಡಿಗೇರ, ಕಲ್ಮೇಶ ಕುಂಬಾರ, ಹನಮಂತ ಹೂಗಾರ, ಮಲ್ಲಪ್ಪ ರಡ್ಡಿ, ಕುಮಾರ ಉಳ್ಳಾಗಡ್ಡಿ, ಸಿದ್ರಾಮಯ್ಯ ಗೋಠೆ, ಸದಾಶಿವ ಇಂಗಳಗಿ, ಸುರೇಶ ಕೆಂಪವಾಡ, ಪರಮಾನಂದ ಹಂಚಿನಾಳ, ಶಂಕರಗೌಡ ಪಾಟೀಲ, ಶ್ರೀಕಾಂತ ಮುಕರೆ, ಮಹಾಲಿಂಗ ಜಿಟ್ಟಿ, ಸುರೇಶ ಕೋಲಾರ, ಸಿದ್ದು ಧಡೂತಿ ಸೇರಿದಂತೆ ಹಲವರು ಇದ್ದರು.