ಅಂತರರಾಷ್ಟ್ರೀಯ

ಅಫ್ಗಾನಿಸ್ತಾನ, ಯುಎನ್‌ಎಸ್‌ಸಿ ಕುರಿತು ಜೈಶಂಕರ್-ಬ್ಲಿಂಕನ್‌ ಚರ್ಚೆ

ಅಫ್ಗಾನಿಸ್ತಾನ, ಯುಎನ್‌ಎಸ್‌ಸಿ ಕುರಿತು ಜೈಶಂಕರ್-ಬ್ಲಿಂಕನ್‌ ಚರ್ಚೆ

ನವದೆಹಲಿ, ಆ 29: ಅಫ್ಗಾನಿಸ್ತಾನದಲ್ಲಿನ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಅಮೆರಿಕ ಆ 31ರೊಳಗೆ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಅಲ್ಲಿನ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್  ಅವರೊಂದಿಗೆ ಭಾರತೀಯ ದೇಶಾಂಗ ಸಚಿವ ಎಸ್ ಜೈಶಂಕರ್ ಮಾತುಕತೆ ನಡೆಸಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾರ್ಯಸೂಚಿಗಳ ಬಗ್ಗೆ ಚರ್ಚಿಸಿದ್ದಾರೆ.

ಈ ಕುರಿತು ಶನಿವಾರ ಮಧ್ಯರಾತ್ರಿ ಟ್ವೀಟ್‌ ಮಾಡಿರುವ ಜೈಶಂಕರ್, "ಅಮೆರಿಕದ ವಿದೇಶಾಂಗ ಸಚಿವ ಬ್ಲಿಂಕನ್ ಅವರೊಂದಿಗೆ ಅಫ್ಘಾನಿಸ್ತಾನದ ಕುರಿತು ಚರ್ಚಿಸಿದ್ದೇವೆ. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಸೂಚಿಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು” ಎಂದಿದ್ದಾರೆ.

ಬ್ಲಿಂಕನ್ ಪ್ರತ್ಯೇಕವಾಗಿ ಟ್ವೀಟ್ ಮಾಡಿ , "ಅಫ್ಘಾನಿಸ್ತಾನ ಮತ್ತು ವಿಶ್ವಸಂಸ್ಥೆಯಲ್ಲಿ ನಿರಂತರ ಸಮನ್ವಯದಲ್ಲಿ ನಮ್ಮ ಹಂಚಿಕೆಯ ಆದ್ಯತೆಗಳನ್ನು ಚರ್ಚಿಸಲು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್‌.ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇವೆ. ಉಭಯ ರಾಷ್ಟ್ರಗಳು ಪಾಲುದಾರಿಕೆಯನ್ನು ಸದೃಢವಾಗಿ ಮುಂದುವರಿಸುವ ಪಣ ತೊಟ್ಟಿದ್ದೇವೆ" ಎಂದಿದ್ದಾರೆ.

ಅಮೆರಿಕ ಮತ್ತು ಇತರ ದೇಶಗಳು ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ತಮ್ಮ ನಾಗರಿಕರು ಮತ್ತು ಸಿಬ್ಬಂದಿಯ ಸ್ಥಳಾಂತರಿಸುವ ಕಾರ್ಯಾಚರಣೆ ಕೈಗೊಂಡಿವೆ. ಆಗಸ್ಟ್ 15 ರಿಂದ ತಾಲಿಬಾನ್ ಆಕ್ರಮಿತ ಅಫ್ಗಾನಿಸ್ತಾನದಿಂದ ಭಾರತ ಕೂಡ ತನ್ನ ರಾಯಭಾರ ಕಚೇರಿಯ ಸಿಬ್ಬಂದಿ, ಅಫ್ಗಾನ್ ಸಿಖ್ಖರು, ಹಿಂದೂಗಳು ಮತ್ತು ಇತರ ದೇಶದ ಪ್ರಜೆಗಳನ್ನು ಒಳಗೊಂಡಂತೆ  550 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.

ಸುದ್ದಿ ಓದಿ