ಶ್ರೀಮದ್ವೀರಶೈವ ಶಿವಯೋಗಿಮಂದಿರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಜಿ
ಹುಬ್ಬಳ್ಳಿ: ಹಗಲಿರುಳು ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿರುವ ಹಾಗೂ ಸಧೃಡ ಸಮಾಜ ನಿರ್ಮಾಣಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಜಗದ್ಗುರು ಮೂರು ಸಾವಿರಮಠದ ಪೀಠಾಧ್ಯಕ್ಷರಾದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಜಿಯವರು ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕು ಶ್ರೀಮದ್ವೀರಶೈವ ಶಿವಯೋಗಿಮಂದಿರ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಸಂದರ್ಭದಲ್ಲಿ ಪೂಜ್ಯ ಸ್ವಾಮಿಜಿಯವರನ್ನು ಹೊರಕೇರಿ ಮಾಸ್ತರ ಪ್ರತಿಷ್ಠಾನ, ಬಸವ ಪರಿಸರ ಸಂರಕ್ಷಣಾ ಸಮಿತಿಯವರು ಮಾಲಾರೆ್ಣ ಮಾಡಿ ಶ್ರೀಗಳ ದರ್ಶನ ಆಶೀರ್ವಾದ ಪಡೆದು ಆತ್ಮೀಯವಾಗಿ ಗೌರವದಿಂದ ಶ್ರದ್ಧಾ ಭಕ್ತಿಯಿಂದ ಶುಭಾಶಯಗಳನ್ನು ಕೋರಿದರು. ಅಭಿನಂದನಾ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದರು. ಶ್ರೀಗಳ ಆಶೀರ್ವಾದ ಸದಾವಕಾಲ ಭಕ್ತರ ಮೇಲೆ ಇರಲಿ ಎಂದುಆಶಯ ವ್ಯಕ್ತಪಡಿಸಿದರು.
ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾಘಟಕದ ಕಾರ್ಯಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಬಸವ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ.ಶಿರೂರ, ಉಪಾಧ್ಯಕ್ಷ ಬಿ.ಎಲ್.ಲಿಂಗಶೆಟ್ಟರ, ವಾಣಿಜ್ಯಇಲಾಖೆಯ ನಿವೃತ್ ಉಪಆಯುಕ್ತರಾದ ಜಿ.ಬಿ.ಗೌಡಪ್ಪಗೋಳ, ಪ್ರೊ ಜಿ.ಬಿ.ಹಳ್ಳಾಳ, ಗುರುರಾಜ ಜಾಡಗೌಡರ, ಕೆ.ಎಸ್.ಇನಾಮತಿ, ಮುಂತಾದವರು ಇದ್ದರು.