ಎಲಬುರ್ಗ

ಜೆಜೆಎಂ ಕಳಪೆ ಕಾಮಗಾರಿ ಉನ್ನತ ಮಟ್ಟದ ತನಿಖೆ ನಡೆಸುವೆ : ಶಾಸಕ ಬಸವರಾಜ್ ರಾಯರೆಡ್ಡಿ

ಜೆಜೆಎಂ ಕಳಪೆ ಕಾಮಗಾರಿ  ಉನ್ನತ ಮಟ್ಟದ ತನಿಖೆ ನಡೆಸುವೆ : ಶಾಸಕ ಬಸವರಾಜ್ ರಾಯರೆಡ್ಡಿ

ಜನ ಸಂಪರ್ಕ ಸಭೆ ಕಾರ್ಯಕ್ರಮ  

ಯಲಬುರ್ಗಾ 25: ತಾಲ್ಲೂಕಿನ ಹಲವೆಡೆ ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಲ್ಲಿ ಅಕ್ರಮ  ನಡೆದಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುತ್ತೇನೆ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದರು.ತಾಲೂಕಿನ ಕಲ್ಲೂರು ಹಾಗೂ ಸಂಗನಾಳ ಗ್ರಾಮದಲ್ಲಿ ಭಾನುವಾರ ದಂದು ನಡೆದ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿ ಅವರು,2024ರ ಒಳಗೆ ಪ್ರತಿಯೊಂದು ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಬಹುನೀರೀಕ್ಷಿತ ಜಲ ಜೀವನ ಮಿಷನ್ ತಾಲೂಕಿನಲ್ಲಿ  ಕಳಪೆ ಕಾಮಗಾರಿ ಹಾಗೂ ಅದರಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ ಎಂದು  ಆರೋಪಿಸಿದ್ದರು.ಯೋಜನೆ ಅನುಷ್ಠಾನಗೊಳಿಸುವಲ್ಲಿ, ಗ್ರಾಮಗಳ ಆಯ್ಕೆ ಹಾಗೂ ಎಸ್ಟಿಮೇಟ್ ತಯಾರಿಕೆಯಿಂದ ಕಾಮಗಾರಿ ಮುಕ್ತಾಯ ದವರೆಗೆ ಹಾಗೂ ಅಂತಿಮ ಬಿಲ್ ಪಾವತಿಸುವವರೆಗೆ ಸಮರ​‍್ಕವಾಗಿ ನಿರ್ವಹಣೆ ಮಾಡಲು ಬಿಜೆಪಿ ಸರ್ಕಾರದ ಬೇಜವಾಬ್ದಾರಿತನ, ಹಾಗೂ  ಇದರ ಲಾಭ ಪಡೆಯುತ್ತಿರುವ ಗುತ್ತಿಗೆದಾರರು ಕಳಪೆ ಸಾಮಗ್ರಿಗಳನ್ನು ಅಳವಡಿಸಿ ಯಾಮಾರಿಸುವ,   ಕೆಲಸವನ್ನು  ಜನರಿಗೆ ಮಾಡುತ್ತಿದ್ದಾರೆ.ಕ್ಷೇತ್ರದಲ್ಲಿ ನಡೆದ ಜಲ ಜೀವನ ಮಿಷನ್ ಯೋಜನೆಯಲ್ಲಿ ನಡೆದ ಅವ್ಯವಹಾರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಜುಲೈ 3ತಾರೀಕು ಅಧಿವೇಶನದಲ್ಲಿ ನಾನು ಈ ವಿಷಯದ ಬಗ್ಗೆ ಚರ್ಚಿಸುತ್ತೇನೆ  ಎಂದರು.ಈ ವೇಳೆ ತಹಶೀಲ್ದಾರ್ ವಿಠಲ ಚೌಗಲೆ, ತಾಪಂ ಇಓ ಸಂತೋಷ ಪಾಟೀಲ್ ಬಿರಾದಾರ್, ಹಾಗೂ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಪಾಟೀಲ್, ಕೇರಬಸಪ್ಪ ನಡಗುಂದಿ, ಡಾ.ಶಿವನಗೌಡ ದಾನರೆಡ್ಡಿ, ರೈಮಾನ್ ಸಾಬ್ ನಾಯಕ್, ಕಳಕೇಶ ಸೂಡಿ, ಸುರೇಶ ದಾನಕೈ, ಅಧಿಕಾರಿಗಳು ಸೇರಿ ಪಕ್ಷದ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ