ಕುಕನೂರ್

ಇಟಗಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಭುರಾಜ, ಉಪಾಧ್ಯಕ್ಷರ ಬಸವರಾಜೇಶ್ವರಿ ಅವಿರೋಧ ಆಯ್ಕೆ

ಇಟಗಿ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಭುರಾಜ,  ಉಪಾಧ್ಯಕ್ಷರ ಬಸವರಾಜೇಶ್ವರಿ ಅವಿರೋಧ ಆಯ್ಕೆ


ಲೋಕದರ್ಶನ ವರದಿ 

ಕುಕನೂರ 20:  ತಾಲೂಕಿನ ಇಟಗಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ  ಪ್ರಭುರಾಜ ಮಲ್ಲಪ್ಪ ಹಳ್ಳಿ ಹಾಗೂ  ಉಪಾಧ್ಯಕ್ಷರಾಗಿ ಬಸವರಾಜೇಶ್ವರಿ ಶಾಂತಯ್ಯ  ಕಂತಿ  ಅವಿರೋಧವಾಗಿ ಆಯ್ಕೆಯಾದರು.  

ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಚುನಾಚಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರಾದ  ಪ್ರಭುರಾಜ ಮಲ್ಲಪ್ಪ ಹಳ್ಳಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜೇಶ್ವರಿ ಶಾಂತಯ್ಯ ಕಂತಿ  ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರ ಪರಿಣಾಮ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ತಹಸಿಲ್ದಾರ ಚಿದಾನಂದ ಗುರುಸ್ವಾಮೀ ಘೋಷಿಸಿದರು.  

ಗ್ರಾಮ ಪಂಚಾಯತಿಯೋ ಒಟ್ಟು 15 ಸದಸ್ಯರ ಬಲ ಹೊಂದಿದ್ದು ಎಲ್ಲಾ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಪ್ರಮುಖರಾದ  ಶಿವುಕುಮಾರ ಗುಳಗಣ್ಣವರ, ಸೋಮನಗೌಡ್ರ ಸೋಂಪುರ, ಅಂದಪ್ಪ ಹಳ್ಳಿ,ಬಸವರಾಜ ಮೇಷ್ಟ್ರು ದೇವರಾಜ ಹಿರೇಮನಿ ಹಾಗೂ ಸದಸ್ಯರಾದ ಗವಿಸಿದ್ದಪ್ಪ ಮುದ್ದಾಬಳ್ಳ, ಕಲಾವತಿ ಕಳ್ಳಿ, ರೇಣುಕಾ ಉಪ್ಪಾರ, ರತ್ನಮ್ಮ ಬಜೇಂತ್ರಿ, ಲಕ್ಷ್ಮಣ್ಣ ಮ್ಯಾಗೇರಿ, ನಿರ್ಮಲಾ ಹಿರೇಮನಿ, ಲಕ್ಷ್ಮವ್ವ, ಈರಮ್ಮ ಹಡಪದ,ಲಕ್ಷ್ಮವ್ವ ತಳವಾರ,ಸಂತೋಷ ಗೊಂಡಬಾಳ,ದೇವಪ್ಪ ಹರಿಜನ,ಲಲಿತಾದೇವಿ ದಿಂಡೂರ,ಸುವರ್ಣ ಕುರಿ,ರವಿ ಲಮಾಣಿ, ಇನ್ನಿತರರು ಇದ್ದರು.  


ಕೊಟ್ 01 : ಇಟಗಿ ಗ್ರಾಮಕ್ಕೆ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ ಬರುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸುವುದು, ಗ್ರಾಮವನ್ನು ರಾಜ್ಯದಲ್ಲಿ ಮಾದರಿ ಗ್ರಾಂ ಪಂಚಾಯತನ್ನಾಗಿ ರೂಪಿಸಿವುದೇ ನಮ್ಮ ಉದ್ದೇಶ.  

ಪ್ರಭುರಾಜ.ಹಳ್ಳಿ                                      

 ಅಧ್ಯಕ್ಷ ಇಟಗಿ ಗ್ರಾಮ ಪಂಚಾಯತ 


ಸುದ್ದಿ ಓದಿ