ಎಲಬುರ್ಗ

ಶಿಕ್ಷಣ ವ್ಯಾಪಾರಿಕರಣವಾಗಿ ಮಾರ್ಪಾಡುತ್ತಿರುವುದು ವಿಷಾದಕರ ಸಂಗತಿ: ಸಂಗಪ್ಪ ಬಂಡಿ

ಶಿಕ್ಷಣ ವ್ಯಾಪಾರಿಕರಣವಾಗಿ ಮಾರ್ಪಾಡುತ್ತಿರುವುದು ವಿಷಾದಕರ ಸಂಗತಿ: ಸಂಗಪ್ಪ ಬಂಡಿ


ಯಲಬುರ್ಗಾ 06: ಶಿಕ್ಷಣ ರಂಗ ತನ್ನದೇ ಆದ ಇತಿಹಾಸವನ್ನು ಹೊಂದಿತ್ತು. ಆದರೆ ಇಂದು ದುರಂತವೆಂದರೆ ಶಿಕ್ಷಣ ವ್ಯಾಪಾರಿಕರಣವಾಗಿ ಮಾರು​‍್ಡತ್ತಿರುವುದು ವಿಷಾದಕರ ಸಂಗತಿಯಾಗಿದ್ದು ಮುಂಬರುವ ದಿನ ಮಾನಗಳಲ್ಲಿ ಈ ಕುರಿತು ಸರ್ಕಾರ ಗಂಭೀರವಾಗಿ ಆಲೋಚಿಸಿ ದೇಶದ ಸಾಮಾನ್ಯರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು. ಎಂದು ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಸಂಗಪ್ಪ ಬಂಡಿ ಅಭಿಪ್ರಾಯಪಟ್ಟರು. 


 ಅವರು ತಾಲೂಕಿನ ಕರಮುಡಿ ಗ್ರಾಮದಲ್ಲಿ ವಿಸ್ತಾರ ಸಂಸ್ಥೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚಣೆಯ ನಿಮಿತ್ಯ ಹಮ್ಮಿಕೊಂಡಿದ್ದ ಶಿಕ್ಷಕರಿಗೆ ಗುರುವಂದನೆ ಮತ್ತು ನಮ್ಮ ನಡೆ ಶಾಲೆಯ ಕಡೆ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಂತಮ್ಮ ಶರಣಪ್ಪ ಕಂಪಗೌಡ್ರ ಸರಕಾರಿ ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಶಾಮಿದಸಾಬ ಮುಲ್ಲಾ ಮಾತನಾಡಿ ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಆದರೂ ಸಹ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಓದಲು ಕಳುಹಿಸಿತ್ತಿರುವುದು ವಿಪರ್ಯಾಸಕರ ಸಂಗತಿ. ಇದರಿಂದಾಗಿ ಇಂದು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿತ್ತಿವೆ ಎಂದರು. ವಿಸ್ತಾರ ಸಂಸ್ಥೆಯ ಸಹ ನಿರ್ದೇಶಕರಾದ ನಾಜೀರ ಪಿ.ಎಸ್‌. ರವರು ಪ್ರಾಸ್ತಾವಿಕ ಮಾತನಾಡಿದರು.  


ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಶರಣಪ್ಪ ಬಲಕುಂದಿ ಕನ್ನಡ ಪರ ಹೋರಾಟಗಾರ ಸ.ಶರಣಪ್ಪ ಪಾಟೀಲ್, ದಳಪತಿ ಶರಣಗೌಡ ಪಾಟೀಲ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಶಿವಪುತ್ರ​‍್ಪ ಮಲ್ಲಿಗೆವಾಡ, ಹುಚ್ಚುಸಾಬ ಬಡಿಗೇರ, ವಿಸ್ತಾಸ ಸಂಸ್ಥೆಯ ಶೀಲಾ, ಶಿಕ್ಷಕರಾದ ಮರ್ತುಜಾ ಮುಜಾವರ, ಬಸವರಾಜ ಕೊಂಡಗುರಿ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದು. ರವಿಚಂದ್ರ ಕೆಂಚರಡ್ಡಿ ನಿರೂಪಿಸಿದರು. ಭೀಮಣ್ಣ ಹವಳಿ ವಂದಿಸಿದರು. 


ಸುದ್ದಿ ಓದಿ