ಕುಷ್ಟಗಿ

ಕೂಲಿಕಾರರ ಆರೋಗ್ಯ ರಕ್ಷಣೆ ನಮ್ಮ ಕರ್ತವ್ಯ : ಶಿವಪ್ಪ ಸುಬೇದಾರ್ ಅಭಿಪ್ರಾಯ

ಕೂಲಿಕಾರರ ಆರೋಗ್ಯ ರಕ್ಷಣೆ ನಮ್ಮ ಕರ್ತವ್ಯ : ಶಿವಪ್ಪ ಸುಬೇದಾರ್ ಅಭಿಪ್ರಾಯ

ಕುಷ್ಟಗಿ 25: ಕೂಲಿಕಾರರಿಗೆ ಕೆಲಸ ಕೊಡುವುದಷ್ಟೇ ಅಲ್ಲದೇ, ಅವರ ಆರೋಗ್ಯವನ್ನು ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ್ ಹೇಳಿದರು.  

ತಾಲೂಕಿನ ಲಿಂಗದಹಳ್ಳಿ ಗ್ರಾ.ಪಂ ವ್ಯಾಪ್ತಿಯ  ಕೂಲಿಕಾರರಿಗೆ ನಾಲಾ ಹೂಳೆತ್ತುವ ಕೆಲಸ ನೀಡಲಾಗಿದ್ದು, ಕಾಮಗಾರಿ ಸ್ಥಳದಲ್ಲಿ ಗುರುವಾರ ಗ್ರಾಮ ಪಂಚಾಯತಿ ಹಾಗೂ ಕರ್ನಾಟಕ ಆರೋಗ್ಯ ಅಮೃತ ಅಭಿಯಾನ  ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಮಾತನಾಡಿದ ಅವರು  

ಯಾರಿಗಾದರೂ ಅನಾರೋಗ್ಯ ಕಂಡು ಬಂದರೆ ವೈದ್ಯರ ಹತ್ತಿರ ಹೋಗಬೇಕಾಗಿತ್ತು ಆದರೆ ಕಾಲ ಬದಲಾದಂತೆ ಪ್ರತಿಯೊಬ್ಬರು ಆರೋಗ್ಯದಿಂದ ಇರಬೇಕೆಂಬ ದೃಷ್ಟಿಕೋನದಿಂದ ವೈದ್ಯರೇ ಇಂದು ನೀವು ಇರುವ ಜಾಗಕ್ಕೆ ಬಂದು ಆರೋಗ್ಯ ತಪಾಸಣೆ ಮಾಡುತ್ತಿರುವುದು ಅತ್ಯಂತ ಖುಷಿಯ ಸಮಾಚಾರವಾಗಿದೆ.   

ಪ್ರತಿಯೊಬ್ಬ ಕೂಲಿಕಾರರು ಈ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದರು.   

ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ (ಗ್ರಾ ಉ) ನಿಂಗನಗೌಡ ವಿ ಎಚ್ ಮಾತನಾಡಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ ಇರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಸೌಲಭ್ಯಗಳ  ಕುರಿತು ಮಾಹಿತಿಯನ್ನು ನೀಡಿದರು.  

ಜೊತೆಗೆ 2023 ಏಪ್ರಿಲ್ 01 ರಿಂದ ನರೇಗಾದಡಿ ಕೂಲಿ ಕೆಲಸ ಮಾಡುವ ಕೂಲಿಕಾರರಿಗೆ ದಿನಕ್ಕೆ 316 ರೂ.ಗಳು ಕೂಲಿ ಹಣವನ್ನು ಕೊಡಲಾಗುತ್ತದೆ. ಪ್ರತಿ ವರ್ಷ ಒಂದು ಕುಟುಂಬಕ್ಕೆ 100 ದಿನಗಳವರೆಗೆ ನಿಮ್ಮೂರಲ್ಲೇ ನಿಮಗೆ ಕೂಲಿ ಕೆಲಸದ ಖಾತ್ರಿ ಇದೆ. 100 ದಿನ ಕೆಲಸ ಮಾಡಿದ ಒಂದು ಕುಟುಂಬ ವರ್ಷದಲ್ಲಿ 31,600 ರೂ.ಗಳ ಕೂಲಿ ಹಣ ಪಡೆಯಲಿದೆ ಎಂದು ಹೇಳಿದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೂಲಿಕಾರರ ಬಿಪಿ, ಶುಗರ್ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಖಾಯಿಲೆಗಳ ಕುರಿತು ತಪಾಸಣೆ ನಡೆಸಿ, ಮಾತ್ರೆಗಳನ್ನು ನೀಡಿದರು.   

ಪದವೀಧರ ವಿದ್ಯಾರ್ಥಿನಿಯರಿಗೆ  ಆಸರೆಯಾದ ನರೇಗಾ ಕಾಮಗಾರಿ ಸ್ಥಳದಲ್ಲಿ ಪದವೀಧರ ವಿದ್ಯಾರ್ಥಿನಿಯರು ಹಾಗೂ ಅತಿಥಿ ಶಿಕ್ಷಕಿ ರವರು ನರೇಗಾ ಯೋಜನೆಯ ನಾಲಾ  ಹೂಳೆತ್ತುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿ ಬಂದಂತ ಹಣದಿಂದ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ವಿನಿಮಯ ಮಾಡಿಕೊಳ್ಳುತ್ತೇವೆಂದು ವಿದ್ಯಾರ್ಥಿನಿಯರೇ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಂತರ ಇಓ ರವರ ನೇತೃತ್ವದಲ್ಲಿ ಕೂಲಿ ಕಾರ್ಮಿಕರಿಗೆ ಹೊಸ ಉದ್ಯೋಗ ಚೀಟಿಯನ್ನು ವಿತರಣೆ ಮಾಡಲಾಯಿತು.  

ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಕವಿತಾ ಸಿ ಪಾಟೀಲ್, ಗ್ರಾಮ ಪಂಚಾಯತಿ ಅದ್ಯಕ್ಷರಾದ ಶಶಿಕಲಾ ಲವಂಡಿ, ಉಪಾಧ್ಯಕ್ಷರಾದ ಕೆಂಚಪ್ಪ ಸಿದ್ದಾಪುರ,  ಗ್ರಾಮ ಪಂಚಾಯತಿ ಸರ್ವ  ಸದಸ್ಯರು ,  ನರೇಗಾ ತಾಲೂಕ  ಸಿಬ್ಬಂದಿಗಳಾದ ಚಂದ್ರಶೇಖರ್ ಹಿರೇಮಠ, ಬಸವರಾಜ, ಪ್ರಕಾಶ್ ಸಜ್ಜನ್ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮ  ಪಂಚಾಯತಿ ಸಿಬ್ಬಂದಿಗಳಾದ ಕನಕರಾಯ,ಮಂಜುನಾಥ್,ನರಹರಿಯಪ್ಪ, ಪರುಶುರಾಮ, ಕಾಯಕ ಬಂಧುಗಳು, ಕೂಲಿಕಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ