ಎಲಬುರ್ಗ

ಕೋಮು ಸಾಮರಸ್ಯ ಕಾಪಾಡುವುದು ಅತ್ಯಗತ್ಯ: ಪಾಟೀಲ್

ಕೋಮು ಸಾಮರಸ್ಯ ಕಾಪಾಡುವುದು ಅತ್ಯಗತ್ಯ: ಪಾಟೀಲ್

ಯಲಬುರ್ಗಾ 18: ಇಂದು ರಾಜ್ಯದಲ್ಲಿ ಕೋಮು ಸಾಮರಸ್ಯ ಹದಗೆಡಿಸಲು ಕೆಲ ಸಮಾಜ ಘಾತುಕ ಶಕ್ತಿಗಳು ಪ್ರಯತ್ನಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯದ ಜನತೆ ಕೋಮು ಸಾಮರಸ್ಯ ಬಾಂಧವ್ಯದಡಿ ಜೀವನ ಸಾಗಿಸಬೇಕೆಂದು ಕರ್ನಾಟಕ ಜನ ಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ. ಶರಣಪ್ಪ ಪಾಟೀಲ್ ಕರಮುಡಿ ವಿನಂತಿಸಿದ್ದಾರೆ. ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇಂದು ಕರ್ನಾಟಕದಲ್ಲಿ ಆಳುವ ಸರ್ಕಾರ ಮತ್ತು ವಿರೋಧ ಪಕ್ಷದವರು ತಮ್ಮ ರಾಜಕೀಯ ಹಿತಾಶಕ್ತಿಗಾಗಿ ಮತ್ತು ಮತ ಬ್ಯಾಂಕ್ ವೃದ್ಧಿಗಾಗಿ ಸಾಮರಸ್ಯ ಮತ್ತು ಪ್ರೀತಿ ಬಾಂಧವ್ಯದಿಂದ ಜೀವನ ನಡೆಸುವ ವಿವಿಧ ಜಾತಿಯ ಜನರ ನಡುವೆ ಜಗಳ ಹಚ್ಚಿ ಆ ಮೂಲಕ ಮೋಜು ನೋಡುವ ಕೆಲಸ ಮಾಡುತ್ತಿದ್ದು, ನಿಜಕ್ಕೂ ವಿಪರ್ಯಾಸ ಸಂಗತಿ. ರಾಜಕಾರಣಿಗಳ ಮತ ಬುಟ್ಟೆ ರಾಜಕೀಯವನ್ನು ಹಿಂದು, ಮುಸ್ಲಿಂ, ಕ್ರೈಸ್ತ ಜನಾಂಗದ ಜನತೆ ಅರ್ಥಮಾಡಿಕೊಳ್ಳುವ ಮೂಲಕ ಸಹೋದರತ್ವ ಭಾತೃತ್ವ ತತ್ವದಡಿ ಜೀವನ ಸಾಗಿಸಬೇಕು. ಇನ್ನೂ ಕೆಲ ಸಂಘಟನೆಗಳು ರಾಜ್ಯದಲ್ಲಿ ಕೋಮು ಗಲಬೆಗೆ ಪ್ರಚೋದನೆ ನೀಡುತ್ತಿದ್ದು ಅಂತಹ ಯಾವುದೇ ಸಂಘಟನೆ ಇರಲಿ ಅವುಗಳ ಬಗ್ಗೆ ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಜನ ಕಲ್ಯಾಣ ವೇದಿಕೆಯ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಸ. ಶರಣಪ್ಪ ಪಾಟೀಲ್ ಕರಮುಡಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 


ಸುದ್ದಿ ಓದಿ