ಅಸಂಘಟಿತ ವಲಯದ ಫಲಾನುಭವಿಗಳಿಗೆ ಅಧಿಕೃತ ಗುರುತಿನ ಚೀಟಿ ವಿತರಣೆ.
ಮಹಾಲಿಂಗಪುರ : ಸುತ್ತಮುತ್ತಲಿನ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಕೂಲಿ ಕೆಲಸ ಮಾಡುವವರು, ಹಮಾಲಿ ಮಾಡುವವರು, ಕಟ್ಟಡ ಕಾಮರ್ಿಕರು ಅಲ್ಲದೆ ಇನ್ನೂ ಅನೇಕ ಅಸಂಘಟಿತ ಕೆಲಸಗಾರರು ಕಾಮರ್ಿಕ ಗುರುತಿನ ಚೀಟಿ ಕಡ್ಡಾಯ ಹೊಂದುವುದರ ಉದ್ದೇಶ ಹಾಗೂ ಪ್ರಯೋಜನಗಳ ಬಗೆಗೆ ತಿಳಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಪರಶುರಾಮ್ ಮೇತ್ರಿ ಹೇಳಿದರು.ಕಟ್ಟಡ ಕಾಮರ್ಿಕ ಮತ್ತು ಅಸಂಘಟಿತ ಕಾಮರ್ಿಕರ ಕಲ್ಯಾಣ ಸಂಘದ ನೇತೃತ್ವದಲ್ಲಿ ಗುರುವಾರ ದಿವಸ ಕೆಂಗೇರಿಮಡ್ಡಿ ಬಡಾವಣೆಯ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅಸಂಘಟಿತ ವಲಯದ ಫಲಾನುಭವಿಗಳಿಗೆ ಅಧಿಕೃತ ಗುರುತಿನ ಚೀಟಿ ವಿತರಿಸಲಾಯಿತು.
ಸಂಘದ ಕಾರ್ಯದಶರ್ಿ ಸದಾಶಿವ ಪೂಜಾರಿ ಮಾತನಾಡುತ್ತಾ ಕಾಮರ್ಿಕ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಸವಿವರ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಜರ್ುನ ದೊಡಮನಿ, ಲಕ್ಷ್ಮಣ ಮಾಂಗ, ವಿಠ್ಠಲ್ ಕುಳಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜನೆಯಲ್ಲಿ ಸಂಘಟನೆಯ ಪದಾಧಿಕಾರಿ ಭೀಮಸಿ ಮಾವಿನಹಿಂಡಿ, ಕಾಯರ್ಾಧ್ಯಕ್ಷ ಚೆನ್ನಪ್ಪ ಮೇತ್ರಿ, ಸುರೇಶ ಮೇತ್ರಿ, ಸಂಜು ಕನಕಗಿರಿ, ಭಾಷಾಸಾಬ ಕೌಜಲಗಿ, ಸುರೇಶ ಚೆನ್ನದಾಸರ, ಮಲೀಕ ಶೇಕ್, ರಮೇಶ್ ಮಾಂಗ, ಕೆಂಪಣ್ಣ ಮೇತ್ರಿ, ಲಕ್ಷ್ಮಣ ಹೊಸೂರ, ಮಹಾಲಿಂಗಪ್ಪ ದೊಡಮನಿ, ದಾನೇಶ ಮೇತ್ರಿ, ಶ್ರೀಕಾಂತ ನಾಯಕ, ಮಹಾಲಿಂಗ ಸಮಗಾರ, ಶೇರಲಿ ಶೇಕ ಪಾಲ್ಗೊಂಡು ಬಸವರಾಜ ಮಾವಿನಹಿಂಡಿ ನಿರೂಪಿಸಿ ರಮೇಶ ಮಾಂಗ ವಂದಿಸಿದರು