ಯುವಕನ ಮೆರವಣಿಗೆ ವೇಳೆ ಗಲಭೆಗೆ ಈಶ್ವರಪ್ಪನವರೆ ಕಾರಣನಾ : ಡಿ ಕೆ ಶಿವಕುಮಾರ್
ಬೆಂಗಳೂರು: ಫೆಬ್ರವರಿ 22: ಒಬ್ಬ ಮಂತ್ರಿಯಾದವರು 144 ಸೆಕ್ಷನ್ ಉಲ್ಲಂಘನೆ ಮಾಡಿದ್ದರೂ ಯಾಕೆ ಕೇಸ್ ಹಾಕಿಲ್ಲ, ವಿಧಾನಸಭೆ ಅಧಿವೇಶನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ.
ಇಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಡಿಕೆ ಶಿವಕುಮಾರ್, ಯುವಕನ ಮೆರವಣಿಗೆ ವೇಳೆ ಗಲಭೆಗೆ ಈಶ್ವರಪ್ಪನವರೆ ಕಾರಣನಾ ಎಂಬ ವಿಚಾರ ಚರ್ಚೆಗೆ ಮಾಡುತ್ತ. ರಾಜ್ಯದ ಒಬ್ಬ ಮಂತ್ರಿಯವರೇ ಹಾಗೆಲ್ಲ ಮಾಡಿದಮೇಲೆ ಯಾಕೆ ಬಿಟ್ಟಿದ್ದೀರಾ, ಅವರೆ ನಿಂತುಕೊಂಡು ಮೆರವಣಿಗೆ ಮಾಡಿಸಿ ಕಲ್ಲು ಹೊಡೆಸಿದ್ರಲ್ಲ ಕೇಸ್ ಯಾಕೆ ಹಾಕಿಲ್ಲ ಇದಕ್ಕೆ ಡಿಜಿ, ಎಸಪಿ ಉತ್ತರ ನೀಡಬೇಕು, ಸದ್ಯ ಗೃಹಮಂತ್ರಿಗಳು ಇದಕ್ಕೆ ಯಾವುದೇ ಉತ್ತರ ನೀಡುವುದಿಲ್ಲ ಬಿಡಿ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಖಾಕಿ ಬಟ್ಟೆ ಹಾಕಿರುವವರು ಇದಕ್ಕೆ ಉತ್ತರಿಸಬೇಕು ಇಲ್ಲ ಖಾಕಿ ಕಳಚಿ ಕೇಸರಿ ಹಾಕಲಿ ಸರ್ಕಾರ ಮತ್ತು ಪೋಲಿಸರು ವಿರುದ್ದ ಡಿಕೆಶಿ ಗರಂ ಆದರು.
ಕಳೆದ 5 ದಿನ ನಮ್ಮ ಪಕ್ಷದ ಶಾಸಕರು ಅಹೋರಾತ್ತಿ ಧರಣಿ ಮಾಡ್ತಿದ್ದೇವೆ. 24 ಪರಿಷತ್ ಸದಸ್ಯರು,52 ಜನ ಶಾಸಕರು ಸದನದಲ್ಲಿ ಮಲಗಿದ್ದೇವೆ ಧರಣಿ ನಡೆಸಿದ್ದೇವೆ. ಇಂದು ಕೂಡ ನಡೆಸುತ್ತೇವೆ. ಆಂತರಿಕವಾಗಿ ಸದನ ಮೊಟಕು ಮಾಡ್ತಾರೆ ಅಂತ ತಿಳಿದುಬಂದಿದೆ. ಅಧಿವೇಶನ ಮೊಟಕು ಮಾಡಿದ್ರೆ ರಾಜ್ಯಪಾಕರನ್ನು ಭೇಟಿ ಮಾಡಿ ಮನವಿ ಮಾಡ್ತೀವಿ ಎಂದರು.ಇಂತ ರಾಷ್ಟ್ರದ್ರೋಹಿಯನ್ನು ಸಚಿವರನ್ನಾಗಿ ಇಟ್ಟುಕೊಂಡಿರುವುದರಿಂದ ಯುವಕನ ಹತ್ಯೆಯಾಗಿದೆ ಸದಸನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ 144 ಸೆಕ್ಷನ್ ಹಾಕಿದೆ, ಆದರೂ ಮಂತ್ರಿಯಾದವರು ಮೆರವಣಿಗೆ ಮಾಡಿ ಆಸ್ತಿ ಪಾಸ್ತಿ ಹಾನಿ ಮಾಡಿದ್ದಾರೆ, ನಾಲಿಗೆಗೂ ಮೆದುಳಿಗೂ ಸಂಬಂಧ ಇಲ್ಲ ಅಂತ ಸಿದ್ದರಾಮಯ್ಯನವರು ಹೇಳ್ತಾನೆ ಇದ್ದಾರೆ
ಶಿವಮೊಗ್ಗದಲ್ಲಿ ನಡೆದ ಪ್ರಕರಣ NIA ತನಿಖೆಯಾಗಬೇಕೆಂದು ಹೇಳಿದ್ದಾರೆ ಪೋಲಿಸರ ಮೇಲೆ ಸಚಿವರಿಗೆ ನಂಬಿಕೆ ಇಲ್ಲ ಗೃಹ ಸಚಿವ,ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಶಿವಮೊಗ್ಗ ಸೇವೆ ಮಾಡಿದ್ದಾರೆ ಎಲ್ಲಾ ಒಪ್ಪುತ್ತೇನೆ ಆದರೆ ಈ ರೀತಿ ಆದ್ರೆ ಯಾರು ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಮಾಡ್ತಾರೆ ? ದಕ್ಷಿಣ ಕನ್ನಡ ಉಡುಪಿ ಎಷ್ಟು ಅಫೆಕ್ಟ್ ಆಗಿದೆ ಅನ್ನೊದು ಈಗಾಗಲೆ ಗೊತ್ತಿದೆ . ಈಶ್ವರಪ್ಪ ಜಿಲ್ಲೆಯ ನಾಗರಿಕರನ್ನು ಬದುಕಿದ್ದಂಗೆ ಸಾಯಿಸುತ್ತಿದ್ದಾರೆ ತನಿಖೆಯಾಗಲಿ,ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಸದನದಲ್ಲಿ ಆಗ್ರಹಿಸಿದರು.