ಧಾರವಾಡ - ಹುಬ್ಬಳ್ಳಿ

ಜೆ.ಎಸ್‌.ಎಸ್ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ಅಂತರರಾಷ್ಟ್ರೀಯ ಕೀರ್ತಿ

ಜೆ.ಎಸ್‌.ಎಸ್ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ಅಂತರರಾಷ್ಟ್ರೀಯ ಕೀರ್ತಿ

ಲೋಕದರ್ಶನ ವರದಿ 

ಧಾರವಾಡ 19 : ಜೆ.ಎಸ್‌.ಎಸ್ ಮಂಜುನಾಥೇಶ್ವರ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮೃತ್ಯುಂಜಯ ನಗರ, ಧಾರವಾಡದ ವಿದ್ಯಾರ್ಥಿಗಳಾದ ಅರ್ಮಾನ್ ಅಮೀರ್ಜಾನ್ ಕಲ್ಲಿಮಣಿ (3ನೇ ತರಗತಿ) ಮತ್ತು ಶಫೀನ್ ಕಲ್ಲಿಮಣಿ (5ನೇ ತರಗತಿ) ಅವರು ಧಾರವಾಡದ ಟೆಕ್ವೆಂಡೋ, ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ಭಾರತದ ಪರವಾಗಿ ಥಾಯ್ಲೆಂಡ್‌ನ ಪಟ್ಟಾಯ ಸಿಟಿ, ಚೋನ್‌ಬುರಿಯಲ್ಲಿ ನಡೆದ 9ನೇ ಹೀರೋಸ್ ಟೆಕ್ವೆಂಡೋ ಇಂಟರ್ ನಾಶನಲ್ ಚಾಂಪಿಯನ್‌ಶಿಪ್ 2026 ರಲ್ಲಿ ಭಾಗವಹಿಸಿ ಅದ್ಭುತ ಸಾಧನೆ ಮಾಡಿದ್ದಾರೆ ವಿಭಾಗದಲ್ಲಿ ಸ್ಪರ್ಧಿಸಿದ ಇಬ್ಬರೂ ವಿದ್ಯಾರ್ಥಿಗಳು ಕಂಚಿನ ಪದಕಗಳನ್ನು ಗೆದ್ದು, ನಮ್ಮ ಶಾಲೆ ಹಾಗೂ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ತಂದಿದ್ದಾರೆ. ಈ ಹೆಮ್ಮೆಯ ಸಾಧನೆಗೆ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದ, ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆ ಸರ್ ಹಾಗೂ ಪ್ರಾಚಾರ್ಯೆ ತ್ರಿವೇಣಿ ಆರ್ ಅವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ