ಅಂತರರಾಷ್ಟ್ರೀಯ ಮಣ್ಣು ದಿನ
ಸಿರುಗುಪ್ಪ 07: ಜಗತ್ತಿನ ಜೀವ ಸಂಕುಲಕ್ಕೆ ಮಣ್ಣು ಆಧಾರ ಸ್ತಂಭ ಮಣ್ಣು ನಮ್ಮ ಭೂಮಿಯ ಮಣ್ಣು ಬೆಳೆಯ ಉತ್ಪಾದಕತೆ ಮತ್ತು ಗುಣಮಟ್ಟದ ಬೆಳೆಗೆ ಮೂಲ ಕಾರಣ ಎಂದು ಜಮೀನ್ ದಾರರು ಹಾಜಿ ಸೈಯದ್ ಮೊಹಿಯುದ್ದೀನ್ ಖಾದ್ರಿ ಸಾಹಬ್ ಅಭಿಪ್ರಾಯಪಟ್ಟರು. 9ನೇ ವಿಶ್ವ ಮಣ್ಣು ದಿನವನ್ನು ನೆನಪಿಸಿ ಅವರು ಮಾತನಾಡುತ್ತಾ ಮಣ್ಣು ಮನುಕುಲದ ಸ್ವತ್ತು ಎಂದರು ಲೋಕಶಿಕ್ಷಣ ಸಾಕ್ಷರತಾ ಸೇನಾನಿ ಎ ಅಬ್ದುಲ್ ನಬಿ ಅವರು ಮಾತನಾಡುತ್ತಾ ವಿಶ್ವ ಸಂಸ್ಥೆಯು ಪ್ರತಿ ವರ್ಷ ಡಿಸೆಂಬರ್ 5ರಂದು ಅಂತರರಾಷ್ಟ್ರೀಯ ಮಣ್ಣು ದಿನಾಚರಣೆಗೆ ಸಮ್ಮತಿ ಸೂಚಿಸಿ ಸಿಗುವುದರಿಂದ 2013ರಿಂದ ವಿಶ್ವ ಮಣ್ಣು ದಿನ ಆಚರಿಸಲಾಗುತ್ತದೆ ಎಂದರು.
ಮಣ್ಣಿನ ಆರೋಗ್ಯ ಕಾಪಾಡುವುದು ಜಗತ್ತಿನಲ್ಲಿ ಶೇ.95ರಷ್ಟು ಆಹಾರ ಉತ್ಪಾದನೆಯೂ ಮಣ್ಣಿನಿಂದ ರೈತ ಮಾತ್ರವಲ್ಲದೆ ಸಮಾಜದ ಪ್ರತಿಯೊಬ್ಬರೂ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ ಅವರು ತಿಳಿಸಿದರು. ಹಾಜಿ ಹಂಡಿ ಹುಸೇನ್ ಬಾಷಾ, ಹಂಡಿ ಹಾಶಿಮ್, ಖತೀಬ್ ಜಹೀರುದ್ದೀನ್ ಬಾಬು, ಎ ಮೊಹಮ್ಮದ್ ಇಬ್ರಾಹಿಂ, ಮಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಬಿಕೆ ಅಲ್ಲಾಭಕ್ಷಿ, ಮೊಹಮ್ಮದ್ ಖಲೀಲ್ ಇತರರು ಉಪಸ್ಥಿತರಿದ್ದರು.ನಗರದ ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಡೆದ ವಿಶ್ವ ಮಣ್ಣು ದಿನಾಚರಣೆ ಯಲ್ಲಿ ಕೃಷಿ ಸಂಶೋಧನಾ ಮುಖ್ಯಸ್ಥರಾದ ಡಾ ಬಸವಣ್ಣಪ್ಪ ಪೊಲೀಸ್ ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ಟಿ ಆರ್ ಪವಾರ್, ಕಾಳಿ ಕೃಷ್ಣ ಸಹಾಯಕ ಕೃಷಿ ನಿರ್ದೇಶಕ ಎನ್ ನಜೀರ್ ಅಹ್ಮದ್, ಗುರುಲಿಂಗಪ್ಪ ಮಣ್ಣು ವಿಜ್ಞಾನಿ ಡಾ ಅಶೋಕ್ ಕುಮಾರ್ ರೈತ ಮುಖಂಡರು ಭಾಗವಹಿಸಿದ್ದರು.