ಮಹಲಿಂಗಪುರ

ಕ್ರೀಡೆಗಳಿಂದ ಬೌಧ್ಧಿಕ, ದೈಹಿಕ ಕ್ಷಮತೆ ಸಾಧ್ಯ : ಮಹೇಶ ಮನ್ನಯ್ಯನವರಮಠ

ಕ್ರೀಡೆಗಳಿಂದ ಬೌಧ್ಧಿಕ, ದೈಹಿಕ ಕ್ಷಮತೆ ಸಾಧ್ಯ : ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ 20: ಬೌಧ್ಧಿಕ ಕ್ಷಮತೆಯಷ್ಟೇ ದೈಹಿಕ ಕ್ಷಮತೆ ಮುಖ್ಯ. ಕ್ರೀಡೆಗಳಿಂದ ದೈಹಿಕ ಕ್ಷಮತೆ ಗಳಿಸಲು ಸಾಧ್ಯ ಎಂದು ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಹೇಳಿದರು. 

ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಜರುಗಿದ ಕೆಜಿಎಸ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಕೋಟಾದಲ್ಲಿ ವಿಫುಲ ಅವಕಾಶಗಳಿದ್ದು  ಕ್ರೀಡಾ ಪ್ರತಿಭೆಯಿಂದ ನಿಮ್ಮದಾಗಿಸಿಕೊಳ್ಳಿ ಎಂದರು. 

ನವಚೇತನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಸೋಲು ಗೆಲುವು ಮುಖ್ಯವಲ್ಲ, ಸೋಲನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಿಂದ ಗೆಲುವಿನ ದಾರಿ ಸುಗಮವಾಗುತ್ತೆ ಎಂದರು. 

ತಾಲೂಕು ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್‌.ಎಂ.ಕುರಣಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಿಆರ್‌ಪಿ ಎ.ಎಂ.ಮಂಚದ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುಜಾತ ಹೊಸಕೇರಿ ಪ್ರತಿಜ್ಷಾ ವಿಧಿ ಬೋಧಿಸಿದರು. 

ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ ಅಧ್ಯಕ್ಷತೆ ವಹಿಸಿ ಕ್ರೀಡಾಜ್ಯೋತಿ ಬೆಳಗಿಸಿದರು, ಕಾರ್ಯದರ್ಶಿ ಗುರುರಾಜ ಅಂಬಿ ಟ್ರೋಫಿ ಉದ್ಘಾಟಿಸಿದರು, ಬಿಆರ್‌ಪಿ ಎಸ್‌.ಎಲ್‌.ಗಣಿ, ನಿರ್ದೇಶಕ ರಮೇಶ ಮುಳವಾಡ, ದೈಹಿಕ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಸಂಗಮೇಶ ಮುಕಾರ್ತಿಹಾಳ,ಅಜೀಂ ಪ್ರೇಮ್ ಜೀ ಫೌಂಡೇಶನ್ ತಾಲೂಕಾ ನೋಡಲ್ ತುಪಾಕಿ, ವೈ.ಎ.ಮಗದುಮ್, ಪಿ.ಸಿ.ಫಕೀರನ್ನವರ, ಸಿಆರ್‌ಪಿಗಳಾದ ವೈ.ಎಸ್‌.ಲಮಾಣಿ, ಟಿ.ಎಂ.ನಾಯಿಕವಾಡಿ, ಎಸ್‌.ಎನ್‌.ಬ್ಯಾಳಿ, ಎಸ್‌.ಜಿ.ಕೌಜಲಗಿ, ದೈಹಿಕ ಶಿಕ್ಷಕ ಆರ್‌.ಜಿ.ಹುದ್ದಾರ ಮತ್ತು ಕೆಜಿಎಸ್ ವಲಯದ 30 ಕ್ಕೂ ಅಧಿಕ ಶಾಲೆಯ ಮಕ್ಕಳು ಶಿಕ್ಷಕರಿದ್ದರು. 

ಸಾಕ್ಷಿ ಗೊಂದಿ ಮತ್ತು ಸಂಗಡಿಗರು ಪ್ರಾರ್ಥಿಸಿ, ನಾರನಗೌಡ ಉತ್ತಂಗಿ ಸ್ವಾಗತಿಸಿ, ಪ್ರೀತಿ ಕಲ್ಯಾಣಿ ಮತ್ತು ಶಮಾ ಗಲಗಲಿ ನಿರೂಪಿಸಿ, ಲಕ್ಷ್ಮಿ ಬಿದರಿ ವಂದಿಸಿದರು. 


ಸುದ್ದಿ ಓದಿ