ನೇಕಾರ ಸಮುದಾಯಕ್ಕೆ ಅವಮಾನ: ಆರೋಪ
ಮಹಾಲಿಂಗಪುರ 12: ಜಿಲ್ಲೆಯಾದ್ಯಂತ ನೇಕಾರರು ಮೃತರಾದರೆ ಅವರ ಮನೆಗಳಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಕೇಳದೆ, ಉಸ್ತುವಾರಿ ಸಚಿವರು, ಈ ಭಾಗದ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿಯವರಾಗಲಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡು ನೇಕಾರ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರ್ಕಿ ಆರೋಪಿಸಿದ್ದಾರೆ.
ಜುಲೈ 11ರಂದು ರವಿವಾರ ರಾತ್ರಿ ನೇಣಿಗೆ ಶರಣಾದ ಪಟ್ಟಣದ 36ವರ್ಷದ ನೇಕಾರ ಮಲ್ಲಪ್ಪ.ಅದೃಶಪ್ಪ.ಯಡಪ್ಪನವರ್ ಮನೆಗೆ ಭೇಟಿ ನೀಡಿ ವಿವರಣೆ ಪಡೆದು ಮಾತನಾಡಿದ ಅವರು, ಕಳೆದ ಹಾಗೂ ಪ್ರಸಕ್ತ ಕೊರೋನಾ ಸಂಕಷ್ಟದಿಂದ ಎಲ್ಲ ವರ್ಗದವರೂ ತೊಂದರೆಗೀಡಾಗಿದ್ದಾರೆ. ಇದರಲ್ಲಿ ಅತಿ ಕನಿಷ್ಠ ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ತೊಂದರೆಗೀಡಾದವರೆಂದರೆ ಅದು ನೇಕಾರರು. ಸಾಲಬಾಧೆಯಿಂದ ಜಿಲ್ಲೆಯ ಬನಹಟ್ಟಿ ಹಾಗೂ ಮಹಾಲಿಂಗಪುರದ ಇಬ್ಬರು ನೇಕಾರರನ್ನು ಒಳಗೊಂಡು ಇಲ್ಲಿವರೆಗೆ ರಾಜ್ಯದಲ್ಲಿ 25 ಜನ ನೇಕಾರರು ನೇಣಿಗೆ ಶರಣಾಗಿದ್ದಾರೆ ಎಂದರು.
ಮಹಾಲಿಂಗಪುರದ ಹ್ಯಾಗಾಡಿ ಪ್ಲಾಟ್ ನಿವಾಸಿಯಾದ ಮಲ್ಲಪ್ಪ.ಅದೃಶಪ್ಪ.ಯಡಪ್ಪನವರ್ ಕೊರೋನಾ ಲಾಕ್ ಡೌನ್ ಕಾರಣ ನೇಕಾರಿಕೆ ಕೆಲಸವಿಲ್ಲದೆ ಇವರನ್ನು ಕೂಡ ಸಾಲದ ಸುಳಿಗೆ ಸಿಲುಕಿಸಿತು.
ಮೃತ ಮಲ್ಲಪ್ಪ ತನ್ನ ಸ್ವಂತ ಮನೇಯಲಿರೋ ಮಗ್ಗಗಳಿಗೆ ಕಚ್ಚಾಮಾಲು ದೊರಕದೆ ಬಂದ್ ಮಾಡುವ ಪರಿಸ್ಥಿತಿ ಒದಗಿ, ಬೇರೆಯವರ ಕಡೆಗೆ ಕೂಲಿಗಾಗಿ ಮಗ್ಗಗಳನ್ನು ನಡೆಸಿ, ಬರುವ ಸ್ವಲ್ಪ ಸಂಬಳದಲ್ಲಿ ಮನೆ ನಡೆಸುವುದೇ ದುಸ್ತರವಾಗಿ ಹೋಯ್ತು. ಕ್ರಮೇಣ 02ರಿಂದ03 ಲಕ್ಷ ಸಾಲವಾಗಿ, ಸಾಲ ತೀರಿಸದೆ ಖಿನ್ನತೆಗೆ ಒಳಗಾದರು. ಮುಂದೆ ನನ್ನ ಭವಿಷ್ಯ ಹೇಗಪ್ಪ ಮೂರು ಹೆಣ್ಣು ಮಕ್ಕಳನ್ನು ಸಲುಹುದು ಕೂಡ ಬಾಕಿ ಇದೆ. ಇದೇ ಯೋಚನೆಯಲ್ಲಿ ದಿನಗಳನ್ನು ದೂಡುತ್ತಾ ಕೊನೆಗೆ ಹೆಂಡತಿ ತವರಿಗೆ ಹೋದಾಗ ಮನೆಯಲ್ಲಿ ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ ಎಂದು ವಿವರಿಸಿದರು.
ಆದ್ದರಿಂದ ಚಿಕ್ಕ ಚಿಕ್ಕ ಮೂರು ಹೆಣ್ಣು ಮಕ್ಕಳನ್ನು ಹೊಂದಿರುವ ಈ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ. ಈ ಮಕ್ಕಳ ಭವಿಷ್ಯದ ಸಲುವಾಗಿ ಸರ್ಕಾರದ ಅಧೀನ ಸಂಸ್ಥೆಯಾದ ಕೈಮಗ್ಗ ಮತ್ತು ಜವಳಿ ಇಲಾಖೆಯು ಸರ್ಕಾರದಿಂದ 10ಲಕ್ಷ ರೂಗಳ ಪರಿಹಾರ ಅಥವಾ ಕುಟುಂಬದ ಒಬ್ಬರನ್ನು ಸರಕಾರಿ ನೌಕರಿಗೆ ಪರಿಗಣಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮೃತನ ಮನೆಗೆ ಭೇಟಿ ನೀಡಿದ ನೇಕಾರ ಮುಖಂಡರಾದ ಚನ್ನಪ್ಪ ಹುನಶ್ಯಾಳ (ಆಯ್ಯಂಗ), ಮಹೇಶ ಚಂಡೋಲ, ಚನ್ನಪ್ಪ ಹುನಶ್ಯಾಳ, ಶ್ರೀಕಾಂತ ಜಗದಾಳ, ಅಡಿವೆಪ್ಪ ಹುನಶ್ಯಾಳ, ರಾಜು ಕುಕ್ಕುಗೊಳ, ಸಂಗಪ್ಪ ಹಳ್ಳೂರ, ಶಂಕರ ಪಂಕಿ, ಇನ್ನೂ ಮುಂತಾದವರಿದ್ದರು.