ರಾಮದುರ್ಗ

ಕ್ವಾರಂಟೈನ್ ಮಾಡಿ ಕೊರೊನಾ ಹರಡುವಿಕೆ ತಡೆಯಲು ಸೂಚನೆ

ಕ್ವಾರಂಟೈನ್ ಮಾಡಿ ಕೊರೊನಾ ಹರಡುವಿಕೆ ತಡೆಯಲು ಸೂಚನೆ

ಲೋಕದರ್ಶನ ವರದಿ

ರಾಮದುರ್ಗ 16: ತಾಲೂಕಿನಲ್ಲಿ ಒಟ್ಟು 10 ಕೊರೊನಾ ಪ್ರಕರಣಗಳು ದೃಢ ಪಟ್ಟಿದ್ದು, 6 ಪಟ್ಟಣದಲಿ, 1 ಚೆನ್ನಾಪೂರ ತಾಂಡಾ, 1 ಕಟಕೋಳ,  1 ಸಂಗಳ ಮತ್ತು 1 ಹಂಪಿಹೋಳಿ ಗ್ರಾಮಗಳಲ್ಲಿ ಪ್ರಕರಣಗಳು ಪತ್ತೆಯಾಗಿದು,್ದ ಅವರ ಪ್ರಾಥಮಿಕ ಸಂಪರ್ಕವನ್ನು ಕಂಡು ಹಿಡಿದು ಶೀಘ್ರದಲ್ಲಿಯೇ ಕ್ವಾರಂಟೈನ್ ಮಾಡಿ ಕೊರೊನಾ ಹರಡುವಿಕೆಯನ್ನು ತಡೆಯಲು ತಾಲೂಕ ಟಾಸ್ಕ ಪೂರ್ಸ ಸಮಿತಿ ಶ್ರಮಿಸಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಸಲಹೆ ನೀಡಿದರು. 

ಪಟ್ಟಣದ ಮಹಾಂತೇಶ ನಗರ ಹಾಗೂ ನೇಕಾರಪೇಠಗಳಗೆ ಟಾಸ್ಕ ಪೂರ್ಸ ಸಮಿತಿಯೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು ಕೊರೊನಾ ಪ್ರಕರಣ ಪತ್ತೆಯಾದ ದಿನವೇ ಪ್ರಾಥಮಿಕ ಸಂಮರ್ಪಕರ್ಿತರ ಗಂಟಲು ದ್ರವ ಪರಿಕ್ಷೇಗೆ ಕಳಿಸಿ ಆದಷ್ಟು ಬೇಗನೆ ವರದಿಯನ್ನು ತರಿಸಲು ಕೊರೊನಾ ಟಾಸ್ಕ ಪೂರ್ಸ ಸಮಿತಿ ಸದಸ್ಯರಿಗೆ ತಿಳಿಸಿದರು. 

ತಹಶೀಲ್ದಾರ ಗೀರಿಶ ಸ್ವಾದಿ ಮಾತನಾಡುತ್ತಾ ನಗರದ ಮಹಾಂತೇಶ ನಗರ ಮತ್ತು ಸುರೇಬಾನ ಗ್ರಾಮವನ್ನು 14 ದಿನಗಳ ವರಗೆ ಲಾಕ್ ಡೌನ್ ಮಾಡಲಾಗಿದೆ. ವಿಶ್ವಭಾರತಿ ಕಾಲೇಜ ಹತ್ತಿರ ಬಿಸಿಎಂ ಹಾಸ್ಟೇಲದಲ್ಲಿ 30 ಹಾಸಿಗೆಯ ಕೊರೊನಾ ಕೇರ್ ಸೆಂಟರ್ ತೆರೆಯಲಾಗಿದೆ. ಸಾರ್ವಜನಿಕರು ಆತಂಕ ಪಡದೆ ಮಾಸ್ಕ, ಸ್ಯಾನಿಟ್ಯಸ್ರ ಬಳಕೆಮಾಡಿ ಸಮಾಜಿಕ ಅಂತರ ಕಾಪಾಡಿಕೊಳ್ಳುವದರ ಮುಖಾಂತರ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ತಾಲೂಕ ಆಡಳಿತದೊಂದಿಗೆ ಕೈಜೋಡಿಸಲು ಅವರು ಕರೆ ನೀಡಿದರು, 

ತಾಲೂಕ ವೈದಾಧಿಕಾರಿ ಮಹೇಶ ಚಿತ್ತರಗಿ ಮಾತನಾಡಿ ಕೊರೊನಾ ವೈರಸ್ ತೆಡಗಟ್ಟಲು ಬೇಕಾದ ಸಲಕರಣೆಗಳು ಮತ್ತು ಔಷಡಿಗಳ ವೈವಸ್ಥೆ ಮಾಡಲಾಗಿದೆ ಆಂತಕ ಪಡುವ ಅವಶ್ಯಕತೆ ಇಲ್ಲಾ ಎಂದು ತಿಳಿಸಿದರ. ಡಿ ವಾಯ್ ಎಸ್ ಪಿ ಶಂಕರಗೌಡ ಪಾಟೀಲ, ಡಾ. ನವೀನ ನಿಜಗುಲಿ ಹಾಗೂ ಪಿಎಸ್ಐ ಆನಂದ ಡೋಣ, ಕಂದಾಯ ನೀರಿಕ್ಷಕ ಶಿವು ಗೊರವನಕೊಳ್ಳ ಹಾಗೂ ಇತರರು ಇದ್ದರು.

ಸುದ್ದಿ ಓದಿ