ಮಹಲಿಂಗಪುರ

ಬೇಡಿ ಬಂದ ಭಕ್ತರಿಗೆ ಸಕಲ ಸೌಭಾಗ್ಯ ಕೊಡುತ್ತಾಳೆ ಯಲ್ಲಮ್ಮಾ ತಾಯಿ : ನಿರೂಪಾದಿಶ್ವರ

ಬೇಡಿ ಬಂದ ಭಕ್ತರಿಗೆ ಸಕಲ ಸೌಭಾಗ್ಯ ಕೊಡುತ್ತಾಳೆ ಯಲ್ಲಮ್ಮಾ ತಾಯಿ : ನಿರೂಪಾದಿಶ್ವರ

ನಂದಗಾಂವ ಗ್ರಾಮದಲ್ಲಿ ಜಗನ್ಮಾತೆ ಯಲ್ಲಮ್ಮನ ಮೂರ್ತಿ ಪ್ರತಿಷ್ಠಾಪನೆ 

ವರದಿ ಸಿಹನಮಂತ ನಾವಿ  

ಮಹಾಲಿಂಗಪುರ 22: ಭರತ ಖಂಡ ಸಕಲ ದೇವಾನುದೇವತೆಗಳನ್ನು ಆರಾಧಿಸುವ ಪುಣ್ಯ ಭೂಮಿ. ಇಲ್ಲಿ ಮನೆ ಮನೆಗೂ ಮನೆ ದೇವರಿರುತ್ತಾರೆ, ದೇಶದಲ್ಲಿ ಪ್ರತಿ ಗ್ರಾಮ, ಗ್ರಾಮಗಳಲ್ಲಿ ಎಲ್ಲ ದೇವರುಗಳಿಗೆ ಮಂದಿರ ಕಟ್ಟಿ ಆರಾಧಿಸುವ ಪದ್ಧತಿ ತಲಾ ತಲಾಂತರಗಳಿಂದ ಬಂದಿರುವ ಪದ್ಧತಿ.ದೇಶದಲ್ಲಿ ಅನೇಕ ಶಕ್ತಿ ದೇವತೆಗಳಿದ್ದರೂ, ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ತಾಯಿ ಬೇಡಿ ಬಂದ ಭಕ್ತರಿಗೆ ಎಲ್ಲವನ್ನು ಕೊಡುವ ಕಾಮದೇನು ಆಗಿದ್ದಾಳೆ ಎಂದು ಮರೆಗುದ್ದಿಯ ಅಡಿವೇಶ್ವರ ಮಠದ ಪ ಪೂ ಶ್ರೀ ನಿರುಪಾದಿಶ್ವರ ಮಹಾಸ್ವಾಮಿಗಳು ಹೇಳಿದರು. 

ಸಮೀಪದ ನಂದಗಾಂವ ಗ್ರಾಮದಲ್ಲಿ ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿ ನೂತನ ಮೂರ್ತಿಗೆ ಪ್ರಾಣ ಪ್ರತಿಷ್ಟೇ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮಾತನಾಡಿ ನಾಡಿನ ಎಲ್ಲ ಜನರು ದೇವಿಗೆ ಭಂಡಾರ ಎರಚುತಾ ಉದೋ ಉದೋ ಎಲ್ಲಮ್ಮ ಎನ್ನುವ ಜಯ ಘೋಷಣೆ ಕೂಗುತಾ ದೇವಿಯ ಸನ್ನಿದಿಗೆ ಬಂದು ದೇವಿಯ ದರ್ಶನ ಪಡೆದು ಭಕ್ತಿಯ ಪರಾಕಾಷ್ಟೆ ಮೆರೆದು ದೇವಿ ಕೃಪೆಗೆ ಪಾತ್ರರಾಗುತ್ತಾರೆ.ದೇವಿಯು ಶುದ್ಧ ಮನಸಿನಿಂದ ಬಂದು ಬೇಡುವ ಭಕ್ತರಿಗೆ ಸಕಲ ಸೌಭಾಗ್ಯ ಕರುಣಿಸುತ್ತಾಳೆ. 

ಹಿಂದೂಗಳ ಧರ್ಮದ ದೇವತೆ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪೂಜಿಸುವ ಜಗನ್ಮಾತೆ ಸಾಕ್ಷಾತ್ ಕಾಳಿ ಸ್ವರೂಪವೆಂದೆ ಭಾವಿಸಲಾಗಿದೆ. ಈಕೆಗೆ ಐದು ಜನ ಮಕ್ಕಳು ವಾಸು, ವಿಶ್ವವಾಸು, ಬಿಹುದ್ಯಾನು, ಬೃತ್ವಕಣ್ವ, ಮತ್ತು ರಾಮಭದ್ರ, ಇವರಲ್ಲಿ ರಾಮಭದ್ರ ಮುಂದೆ ಶಿವ ಪಾರ್ವತಿಯ ಆಶೀರ್ವಾದದಿಂದ ಪರುಶು ಎಂಬ ಅಸ್ತ್ರವನ್ನು ಪಡೆದು ಪರುಶುರಾಮ ಎಂದು ಹೆಸರು ಪಡೆಯುತ್ತಾನೆ. 

ಈ ದೇವಿಯನ್ನು ಭಾರತದಾದ್ಯಂತ ವಿವಿಧ ರಾಜ್ಯಗಳಾದ . ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಹಿಮಾಚಲಪ್ರದೇಶ, ತಮಿಳುನಾಡು, ಉತ್ತರಾಂಚಲ, ಕೇರಳ, ಆಂಧ್ರ​‍್ರದೇಶ ಹಿಂದೂ ದೇವತೆಯಾಗಿ ಪೂಜಿಸಲಾಗಿತ್ತಿದೆ. ಅನೇಕ ಪುರಾಣಗಳಲ್ಲಿ ಮಹಾಭಾರತ, ಹರಿವಂಶ, ಭಾಗವತ ಪುರಾಣದಲ್ಲಿ ಉಲ್ಲೇಖವಿದೆ. 

ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಪ್ರತಿ ವರ್ಷ 10 ರಿಂದ 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಕೊಡುತ್ತಾರೆ. ಇದನ್ನು ಉತ್ತರ ಕರ್ನಾಟಕದ ಶಕ್ತಿ ಪೀಠ ಎಂದು ಕರೆಯಲಾಗುತ್ತಿದೆ.ಎಂದು ಹೇಳಿದರು. 

ಭವ್ಯ ಮೆರವಣಿಗೆ : ಮುಂಜಾನೆ 10 ಗಂಟೆಗೆ ಅವರಾದಿ ಗ್ರಾಮದಿಂದ ಆರಂಭವಾದ ಕುಂಭ ಮೇಳ ಕುಂಭ ಹೊತ್ತ ಮುತೈದೆಯರು ಸಕಲ ಮಂಗಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿದ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಾಣ ಪ್ರತಿಷ್ಠೆ ಮಾಡಿ ಗದ್ದುಗೆಯ ಮೇಲೆ ಸ್ಥಾಪನೆ ಮಾಡಲಾಯಿತು. 

ರಾಜು ಬಾರಕೋಲ ಭಾಗವಹಿಸಿದ ಎಲ್ಲ ಮುತೈದೆಯರಿಗೆ ಕುಂಭ ಕೊಡಗಳ ಕೊಡುಗೆ ನೀಡಿದರು. ರಂಗಪ್ಪ ಹೊಸೂರ, ಮತ್ತು ಸಂಗಪ್ಪ ಮುಗಳಖೊಡ ಬಂದ ಭಕ್ತರಿಗೆಲ್ಲ ಮಹಾಪ್ರಸಾದದ ವ್ಯವಸ್ಥೆ ಮಾಡಿ ದೇವಿ ಕೃಪೆಗೆ ಪಾತ್ರರಾದರು. 

ಈ ಸಂಧರ್ಭದಲ್ಲಿ ಮಹಾದೇವ ಮಣ್ಣಣ್ಣವರ, ಶಿವನಗೌಡ ಪಾಟೀಲ, ಸಂಜೀವ ಬಾರಕೋಲ, ರಾಜು ಬಾರಕೋಲ, ರಂಗಪ್ಪ ಹೊಸೂರ, ಸುನಿಲ ಕನಕರಡ್ಡಿ,ಕೃಷ್ಣಾಜಿ ಕುಲಕರ್ಣಿ, ವಿನೋದ ಪಾಟೀಲ, ರಾಮಚಂದ್ರ ಜಾಧವ, ಆನಂದ ಹಮ್ಮಿದಡ್ಡಿ, ಹಣಮಂತ ಬಾರಕೋಲ, ಲಕ್ಷ್ಮಣ ಜೋಗಿ, ನಿಂಗಪ್ಪ ಮದರಖಂಡಿ, ಸದಾಶಿವ ಗೊಬ್ಬರದ, ಪ್ರವೀಣ ಹಿರೇಮಠ,ಭೀಮಶಿ ದುರದುಂಡಿ, ಮಾದೇವ ಗುಗ್ಗರಿ, ಸದಾಶಿವ ದುರದುಂಡಿ, ಯಲ್ಲಪ್ಪ ಉಪ್ಪಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಅಕ್ಕಿಮರಡಿ, ಅವರಾಧಿ, ಧವಳೇಶ್ವರ ಗ್ರಾಮಗಳ ಸಾವಿರಾರು ಜನ ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು. 

ಸುದ್ದಿ ಓದಿ