ಶಾಲೆಗೆ ರಜೆ ಇಲ್ಲ ಎಂದರೂ ಕಾರ್ಯಕ್ರಮಕ್ಕೆ ಹಠ: ಎಸ್ ಡಿ ಎಮ್ ಸಿ ನಡುವೆ ವಾಗ್ವಾದ, ಪೊಲೀಸ್
ದಾಂಡೇಲಿ 07 : ಶಿಕ್ಷಕರ ದಿನಾಚರಣೆಯಂದು ಶಾಲೆಗೆ ರಜೆ ಇಲ್ಲ ಎಂದು ಶಿಕ್ಷಣ ಇಲಾಖೆಯ ಬಿಇಒ ಸ್ಪಷ್ಟಪಡಿಸಿದ್ದರೂ, ಶಾಲೆಯಲ್ಲಿಯೇ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮ ನಡೆಸಲು ಮುಂದಾದ ಸದಸ್ಯರ ವಿನಂತಿಗೆ ಶಾಲಾ ಆಡಳಿತದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಕೆಲ ಶಿಕ್ಷಕಿಯರ ನಡುವೆ ವಾಗ್ವಾದ ನಡೆದಿದೆ. ದಾಂಡೇಲಿ ನಗರದ ಬಂಗೂರನಗರ ಮಾದರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹಳಿಯಾಳದಲ್ಲಿ ನಡೆಯುತ್ತಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮಕ್ಕೆ ತೆರಳುವ ವಿಚಾರವೂ ಮಾತಿನ ಚಕಮಕಿಗೆ ಕಾರಣವಾಗಿದೆ ಎನ್ನಲಾಗಿದೆ. ಶಾಲೆಯಲ್ಲಿಯೇ ಶಿಕ್ಷಕರನ್ನು ಗೌರವಿಸುವ ಉದ್ದೇಶದಿಂದ ಸದಸ್ಯರು ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ಶಾಲಾ ಆಡಳಿತಾಧಿಕಾರಿ ಹಾಗೂ ಶಿಕ್ಷಕಿಯರೊಂದಿಗೆ ಚರ್ಚೆ ನಡೆದಿದೆ. ಈ ವೇಳೆ ಹೊರಗಿನ ವ್ಯಕ್ತಿಯೊಬ್ಬರು ಶಾಲಾ ಆವರಣಕ್ಕೆ ಪ್ರವೇಶಿಸಿ ಚಿತ್ರೀಕರಣ ನಡೆಸಿದ್ದರಿಂದ ಗದ್ದಲ ಉಂಟಾಯಿತು ಎಂದು ಆರೋಪಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಇದೀಗ ಶಾಲೆಗೆ ರಜೆ ಇರಲಿಲ್ಲವೆಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದ್ದರೆ, ಶಾಲಾ ಅವಧಿಯಲ್ಲಿ ಹೊರಗಿನ ವ್ಯಕ್ತಿಗೆ ಶಾಲಾ ಆವರಣ ಪ್ರವೇಶಿಸಿ ಚಿತ್ರೀಕರಣ ನಡೆಸಲು ಅವಕಾಶ ನೀಡಿದವರು ಯಾರು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಅಲ್ಲದೆ, ಶಾಲೆಯಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನಿರಾಕರಿಸಿದ ಕಾರಣವೇನು ಎಂಬುದೂ ಚರ್ಚೆಗೆ ಗ್ರಾಸವಾಗಿದೆ.