ಎಲಬುರ್ಗ

ಉತ್ತಮ ಮನಸ್ಸಿನ ಸೇವೆಗೆ ಇನ್ನರವೀಲ್ ಕ್ಲಬ್ ಮಾದರಿ: ಡಾ. ಮಾಧವಿ ದೇವಿ

ಉತ್ತಮ ಮನಸ್ಸಿನ ಸೇವೆಗೆ ಇನ್ನರವೀಲ್ ಕ್ಲಬ್ ಮಾದರಿ: ಡಾ. ಮಾಧವಿ ದೇವಿ

ಇನ್ನರವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ  

ಲೋಕದರ್ಶನ ವರದಿ 

ಯಲಬುಗ್ರಾ 30 : ಉತ್ತಮ ಮನಸ್ಸಿನ ಸೇವೆಗೆ ಇನ್ನರ್ವೀಲ್ ಕ್ಲಬ್ ಮಾದರಿಯಾಗಿದೆ ಎಂದು ಇನ್ನರವೀಲ್ ಕ್ಲಬ್ನ ಜಿಲ್ಲಾ ಅಧ್ಯಕ್ಷೆ ಡಾ. ಮಾಧವಿ ದೇವಿ ಅವರು ಹೇಳಿದರು. 

ಪಟ್ಟಣದ ಶಿಕ್ಷಕರ ಗುರುಭವನದಲ್ಲಿ ಇನ್ನರವೀಲ್ ಕ್ಲಬ್ನ ವತಿಯಿಂದ ಗುರುವಾರ ನಡೆದ ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ, ಪದಗ್ರಹಣದ ಅಧಿಕಾರಿಯಾಗಿ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು. 

ಉತ್ತಮ ಮನಸ್ಸಿನ ಸೇವೆಗೆ ಇನ್ನರ್ವೀಲ್ ಕ್ಲಬ್ ಮಾದರಿಯಾಗಿದೆ. ಯಶಸ್ಸು ಯಾವಾಗಲು ಒಮ್ಮೆಲೆ ಬರುವುದಿಲ್ಲ. ಅದರ ಹಿಂದೆ ಶ್ರಮ ಇದೆ. ಇದಕ್ಕೆ ಉದಾಹರಣೆಯಾಗಿ ಮಾಜಿ ಅಧ್ಯಕ್ಷೆ ಜ್ಯೋತಿ ಪಲ್ಲೆದ ಅವರು ತಾಲೂಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ನೆರವೇರಿಸಿದ್ದಾರೆ. ಅದರಂತೆ ನೂತನ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಅವರು ಇಂದಿನಿಂದ ಉತ್ತಮ ರೀತಿಯಲ್ಲಿ ಕ್ಲಬ್ ಅನ್ನು ಮುನ್ನಡೆಸುತ್ತಾರೆ ಎಂಬ ನಂಬಿಕೆ ನನ್ನಲ್ಲಿ ಇದೆ. ಇದರ ಜೊತೆಗೆ ಕ್ಲಬ್ಬಿನ ಹಲವು ಯೋಜನೆಗಳನ್ನು ಅತ್ಯಂತ ಸುಲಭವಾಗಿ ಪೂರೈಸಲು ಹೆಚ್ಚು ಹೆಚ್ಚು ಸದಸ್ಯರನ್ನು ಸೇರ್ಪಡೆಗೊಳಿಸಿ ಎಂದರು. 

ಕ್ಲಬ್ ಮಾಜಿ ಅಧ್ಯಕ್ಷೆ ಜ್ಯೋತಿ ಪಲ್ಲೆದ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಮಾಡಿ ಬಳಿಕ ಮಾತನಾಡಿದರು. ಈ ಸಂಸ್ಥೆಯ ನನ್ನ ಅಧ್ಯಕ್ಷತೆಯಲ್ಲಿ ಅನೇಕ  ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಾ. ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದೀನಿ ಎಂದು ಅಂದುಕೊಂಡಿದ್ದೇನೆ. ನನಗೇ ಈ ಸಂಸ್ಥೆಯಲ್ಲಿ ಎರಡು ಅವಧಿಗಳ ಕಾಲ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದು ನನಗೇ ಸಂತಸ ತಂದಿದೆ. ಅದರಂತೆ ನೂತನ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಅವರಿಗೆ ನನಗೆ ಎಲ್ಲರೂ ಸಕರ್ಾರಿ ನೀಡಿದಂತೆ ಅವರಿಗೂ ಕೂಡ ಸಹಕಾರ ನೀಡಿ. ತಾಲೂಕಿನಲ್ಲಿ ಇನ್ನೂ ಈ ಹೆಚ್ಚು ಉತ್ತಮ ಕೆಲಸ ನಿರ್ವಹಿಸಲು ಚೆನ್ನಮ್ಮ ಅವರಿಂದ ಸಾಧ್ಯವಿದೆ. ಅವರು ತಾಲೂಕಿನಲ್ಲಿ ಉತ್ತಮ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ ಎಂದು ನನಗೆ ಭರವಸೆ ಇದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನರ್ ವೀಲ್ ಕ್ಲಬ್ನ ನೂತನ ಅಧ್ಯಕ್ಷೆ ಚನ್ನಮ್ಮ ಪಾಟೀಲ್ ಅವರು ಮಾತನಾಡಿ, ಮಹಿಳೆ ಮನಸ್ಸು ಮಾಡಿದರೆ ಸಮಾಜದಲ್ಲಿ ಉತ್ತಮ ಗೌರವ ಸ್ಥಾನ ಪಡೆಯಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಅದರಂತೆ ಇನ್ನವರ್ಿಲ್ ಕ್ಲಬ್ ಕೂಡ ಒಂದು ಸಮಾಜದಲ್ಲಿ ಒಂದು ಉತ್ತಮ ಕೆಲಸ ನಿರ್ವಹಿಸಲು ನಿಮಗೆ ಅವಕಾಶ ನೀಡಿದ್ದಕ್ಕೆ ಸರ್ವರಿಗೂ ಧನ್ಯವಾದಗಳು. ಇಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜ್ಯೋತಿ ಪಲ್ಲೆದ ಅವರು ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರಂತೆ ನಾನು ಕೂಡ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ಹೊಸ ಹೊಸ ಯೋಜನೆಗಳ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು. 

ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಪುಷ್ಪಾ ಗುರುರಾಜ್ ಅವರು ನೀಡಿದ ಯೋಜನೆಯಂತೆ ಪಿಂಕ್ ಪಸ್ಟ್ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ , ಆರೋಗ್ಯ, ಪರಿಸರ ಸಂರಕ್ಷಣೆ , ಅನಾಥಶ್ರಮ, ಮೂಡನಂಬಿಕೆ ಹೋಗಲಾಡಿಸುವ ಪ್ರಮುಖ ಅಂಶಗಳನ್ನು ಇಟ್ಟು ಕೊಂಡು ಕಾರ್ಯಕ್ರಮ ನಡೆಯಲಿದೆ ಎಂದರು. 

ಕಾರ್ಯಕ್ರಮವನ್ನು ಸವಿತಾ ಓಜನಹಳ್ಳಿ ನಿರೂಪಿಸಿದರು. 

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಗೆ ಸನ್ಮಾನಿಸಿ ಗೌರವಿಸಿದರು. 

ಇದೇ ಸಂದರ್ಭದಲ್ಲಿ ಪಪಂ ಸದಸ್ಯೆ ನಂದಿತಾ ದಾನರೆಡ್ಡಿ, ಸರಕಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಡಾ.ಶಿವರಾಜ ಗುರಿಕಾರ, ಪತಂಜಲಿ ಯೋಗ ತರಬೇತಿ ತಾಲೂಕು ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಹಾಗೂ ನೂತನ ಪದಾಧಿಕಾರಿಗಳು ಇದ್ದರು 

ಸುದ್ದಿ ಓದಿ