ತುಂಗಭದ್ರಾ ನದಿಗೆ ಒಳಹರಿವು ಹೆಚ್ಚಳ ಸುರಕ್ಷಿತ ಸ್ಥಳಗಳಿಗೆ ತೆರಳಲು ಅಧಿಕಾರಿಗಳ ಮನವಿ
ಸಿರುಗುಪ್ಪ ಆಗಸ್ಟ್10:- ತುಂಗಭದ್ರಾ ಜಲಾಶಯಕ್ಕೆ ಒಂದು ವಾರದಿಂದ ನೀರಿನ ಒಳಹರಿವು ಹೆಚ್ಚಾಗಿದ್ದು ಜಲಾಶಯ ಭರ್ತಿಯಾಗಲು ಕೆಲವೇ ಅಡಿ ಬಾಕಿ ಸುರಕ್ಷಿತ ಸ್ಥಳಕ್ಕೆ ತೆರಳಲು ತಹಸೀಲ್ದಾರ್ ಎಸ್ ಬಿ ಕೂಡಲಗಿ ಅವರು ಡಂಗುರ ಹಳ್ಳಿಗಳಲ್ಲಿ ಸಾರುತ್ತಿದ್ದಾರೆ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಒಳ ಹರಿವಿದ್ದು ಯಾವ ಕ್ಷಣದಲ್ಲಾದರೂ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಪ್ರವಾಹ ಸ್ಥಿತಿ ಉಂಟಾಗಬಹುದು ನದಿ ವ್ಯಾಪ್ತಿಯ ಮಣ್ಣೂರು ಎಂ ಸೂಗೂರು ರುದ್ರಪಾದ ನಡಿವಿ ಉಡೆಗೋಳು ನಿಟ್ಟೂರು ಹೆರಕಲ್ಲು ಕೆ ತಾಂಡಾ ಕೆಂಚನಗುಡ್ಡ ಸಿರುಗುಪ್ಪ ದೇಶನೂರು ಇಬ್ರಾಹಿಂ ಪುರು ಬಾಗೇವಾಡಿ ಬೃಂದಾವನ ಕ್ಯಾಂಪ್ ಕುಡುದರಹಾಳು ಶ್ರೀಧರಗಡ್ಡೆ ಹೊನ್ನೂರು ಹಳ್ಳಿ ಚಿಕ್ಕಬಳ್ಳಾರಿ ಹಚ್ಚೊಳ್ಳಿ ಚೆಲ್ಲಾ ಕೂಡ್ಲೂರು ವತ್ತು ಮುರಣಿ ಕೊತಂಬರಿ ತ್ತಲ ಚಿಂತೆ ಗ್ರಾಮಗಳ ಜನರು ಜಾನುವಾರುಗಳು ನದಿ ಕಡೆ ಹೋಗಬಾರದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಹಸೀಲ್ದಾರರು ಡಂಗುರ ಸಾರುತ್ತಿದ್ದಾರೆ ಪರಿವೀಕ್ಷಕರಾದ ಎಸ್ ಮೊಹಮ್ಮದ್ ಸಾದಿಕ್ ಗ್ರಾಮ ಲೆಕ್ಕಾಧಿಕಾರಿ ಮಹಾರುದ್ರಗೌಡ ಮುಖಂಡರಾದ ಪಂಪಣ್ಣ ರಾಜುಗೌಡ ಅಬ್ದುಲ್ ನಬಿ ಇತರರಿದ್ದರು.
ಸುಭದ್ರ ಸಾಕ್ಷರತಾ ಮತ್ತು ಸಂಖ್ಯಾಶಾಸ್ತ್ರ.
ಸಿರುಗುಪ್ಪ :- ಭಾರತ ಸರ್ಕಾರ ಸುಭದ್ರ ಸಾಕ್ಷರತಾ ಸಂಖ್ಯೆ ಶಾಸ್ತ್ರ ಇಂದಿನ ಕಲಿಕೆಯ ತುರ್ತು ಅಗತ್ಯವಾಗಿದೆ ಇದಕ್ಕಾಗಿ ಶಿಕ್ಷಣ ಇಲಾಖೆಯು ಸುಭದ್ರ ಸಾಕ್ಷರತಾ ಮತ್ತು ಸಂಖ್ಯಾ ಶಾಸ್ತ್ರದ ರಾಷ್ಟ್ರೀಯ ಮಿಷನ್ ಸ್ಥಾಪಿಸಲಿದೆ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯರು ಎ ಅಬ್ದುಲ್ ನಬಿ ತಿಳಿಸಿದ್ದಾರೆ 2025 ರ ಒಳಗಾಗಿ ಸುಭದ್ರ ಸಾಕ್ಷರತಾ ಮತ್ತು ಸಂಖ್ಯಾ ಶಾಸ್ತ್ರದ ಉದ್ದೇಶ ಸಾಧಿಸುವ ಸಲುವಾಗಿ ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಅನುಷ್ಠಾನ ಯೋಜನೆ ಸಿದ್ಧಪಡಿಸಬೇಕಿದೆ ಅಲ್ಲದೆ ರಾಷ್ಟ್ರೀಯ ಪುಸ್ತಕ ಪ್ರಚಾರ ನೀತಿಯನ್ನು ರೂಪಿಸುವ ಉದ್ದೇಶ ಹೊಂದಲಾಗಿದೆ ಸರ್ವತೋಮುಖ ಅಭಿವೃದ್ಧಿಗೆ ಗುಣ ಲಕ್ಷಣ ಬೆಳೆಸುವ ಉದ್ದೇಶದಿಂದ ಸಾಕ್ಷರತಾ ಪ್ರಮಾಣ ನಮ್ಮ ದೇಶದ ಭಾಷೆ ಪ್ರದೇಶ ಅಭಿವೃದ್ಧಿ ಸಂಸ್ಕೃತಿ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳಲ್ಲಿ ವೈವಿಧ್ಯತೆ ಇದೆ ಹಾಗಾಗಿ ನೀತಿ ಅನುಷ್ಠಾನ ಮಾಡುವಾಗ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಯೋಜನೆಯನ್ನು ಹೊಂದುವುದು ಮುಖ್ಯ ಎಂದು ಅಬ್ದುಲ್ ನಬಿ ಅವರು ತಿಳಿಸಿದ್ದಾರೆ ಸಾಕ್ಷರತಾ ಕಾರ್ಯ ಕರ್ತರಾದ ಜೆ ನಾಗೇಂದ್ರಗೌಡ ಎ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಅಲಿ ಎ ಮೊಹಮ್ಮದ್ ನಿಜಾಮುದ್ದೀನ್ ಎ ಮೊಹಮ್ಮದ್ ಹಾಜಿ ಇದ್ದರು.